ದೇಶದಲ್ಲಿ ವಿಧ್ವಂಸಕ ಕೃತ್ಯವೆಸಗಲು ಅವಕಾಶವಿಲ್ಲ: ಪಿಎಫ್ ಐ ನಿಷೇಧ ಕ್ರಮ ಸ್ವಾಗತಿಸಿದ ಸಿಎಂ ಬೊಮ್ಮಾಯಿ.

ಬೆಂಗಳೂರು,ಸೆಪ್ಟಂಬರ್,28,2022(www.justkannada.in):  ಪಿಎಫ್ ಐ ಸಂಘಟನೆಯನ್ನ 5 ವರ್ಷಗಳ ಕಾಲ ನಿಷೇಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನ ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೆಎಫ್ ಡಿ ಸಿಮಿ ರೂಪಾಂತರ ಫಲಶೃತಿ ಪಿಎಫ್ ಐ.   ಪಿಎಫ್ ಐ ವಿಧ್ವಂಸಕ ಕೃತ್ಯ ನಡೆಸಿರೋದು ಗೊತ್ತಾಗಿದೆ. ಪಿಎಫ್ ಐ  ಬ್ಯಾನ್ ಗೆ ಎಲ್ಲರೂ ಒತ್ತಾಯ ಮಾಡಿದ್ದರು. ನಮ್ಮ ದೇಶದಲ್ಲಿ ವಿಧ್ವಂಸಕ ಕೃತ್ಯವೆಸಗಲು ಅವಕಾಶವಿಲ್ಲ.  ಮೋದಿ ಅಮಿತ್ ಶಾ ನಾಯಕತ್ವದಲ್ಲಿ  ಪಿಎಫ್ ಐ ಬ್ಯಾನ್ ಆಗಿದೆ ಎಂದರು.

‘ಪಿಎಫ್​​ಐ ನಿಷೇಧಿಸುವಂತೆ ವಿರೋಧ ಪಕ್ಷದವರೂ ಸೇರಿದಂತೆ ಎಲ್ಲರೂ ಮನವಿ ಮಾಡಿದ್ದೆವು. ಪಿಎಫ್​ ಸಂಘಟನೆಯನ್ನು ಯಾವಾಗ ನಿಷೇಧಿಸುವಿರಿ ಎಂದು ಹಲವರು ಪ್ರಶ್ನಿಸುತ್ತಿದ್ದರು. ಈ ಪ್ರಶ್ನೆಗಳಿಗೆ ಇದೀಗ ನಮ್ಮ ಸರ್ಕಾರ ಉತ್ತರ ನೀಡಿದೆ. ಪಿಎಫ್​ಐ ಕಾರ್ಯಕರ್ತರು  ದುಷ್ಕೃತ್ಯ ನಡೆಸಲು ಮುಂದಾಗಿದ್ದರು. ಹಲವು ದೇಶದ್ರೋಹ ಚಟುವಟಿಕೆಗಳಲ್ಲಿಯೂ ಪಿಎಫ್​ ಐ ಭಾಗಿಯಾಗಿತ್ತು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Vandalism-not allowed – country-CM Bommai –welcome- PFI ban.