ಇಂದಿನಿಂದ ವೈಷ್ಣೋದೇವಿ ಯಾತ್ರೆ ಮತ್ತೆ ಆರಂಭ

Promotion

ಬೆಂಗಳೂರು, ಆಗಸ್ಟ್ 21, 2022 (www.justkannada.in): ಇಂದಿನಿಂದ (ಆಗಸ್ಟ್ 21) ವೈಷ್ಣೋದೇವಿ ಯಾತ್ರೆ ಮತ್ತೆ ಆರಂಭವಾಗಲಿದೆ.

ನಿರಂತರ ಮಳೆ, ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವೈಷ್ಣೋದೇವಿ ಯಾತ್ರೆ ಇಂದು ಪುನರಾರಂಭಗೊಂಡಿದೆ.

ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಯಾತ್ರೆಯನ್ನು ಆಗಸ್ಟ್ 21 ರ ಬೆಳಗಿನ ಜಾವದವರೆಗೆ ಸ್ಥಗಿತಗೊಳಿಸಲಾಗಿತ್ತು

ಸ್ಥಳದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕೆ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ. ಪರಿಸ್ಥಿತಿಯನ್ನು ಮಂಡಳಿಯು ನಿಗಾ ವಹಿಸುತ್ತಿದೆ.