ವೈಕುಂಠ ಏಕಾದಶಿ ಹಿನ್ನೆಲೆ: ಒಂಟಿ ಕೊಪ್ಪಲಿನ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ…

ಮೈಸೂರು,ಡಿಸೆಂಬರ್,25,2020(www.justkannada.in):  ಇಂದು ವೈಕುಂಠ ಏಕಾದಶಿ ಹಿನ್ನೆಲೆ, ಕೊರೋನಾ ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು ಒಂಟಿ ಕೊಪ್ಪಲಿನ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.Teachers,solve,problems,Government,bound,Minister,R.Ashok

ಇತ್ತೀಚೆಗೆ ಬ್ರಿಟನ್ ನಲ್ಲಿ ಹೊಸ ಕೊರೋನಾ ರೂಪಾಂತರ ಪತ್ತೆಯಾಗಿದ್ದು ಭಾರತ ಸೇರಿ ಎಲ್ಲಡೆ ಆತಂಕ ಸೃಷ್ಠಿಸಿದೆ. ಹೀಗಾಗಿ ರಾಜ್ಯದಲ್ಲೂ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದ್ದು, ಈ ಹಿನ್ನೆಲೆ ಒಂಟಿ ಕೊಪ್ಪಲಿನ ವೆಂಕಟೇಶ್ವರ ದೇವಾಲಯದಲ್ಲಿ  ವೈಭವದ ವೈಕುಂಠ ಏಕಾದಶಿಗೆ ಬ್ರೇಕ್ ಹಾಕಲಾಗಿದೆ.

ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧ ವಿಧಿಸಲಾಗಿದ್ದು, ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನದ ಮುಖ್ಯದ್ವಾರ ಬಂದ್ ಮಾಡಿದ್ದಾರೆ. ಧಾರ್ಮಿಕ ವಿಧಾನದಂತೆ ಆಡಳಿತ ಮಂಡಳಿಯಿಂದ ಮಾತ್ರ ಪೂಜೆ ಕಾರ್ಯ ನೆರವೇರುತ್ತಿದ್ದು, ಭಕ್ತರು ಹೊರಭಾಗದಿಂದಲೇ ದೇವರಿಗೆ ನಮಸ್ಕರಿಸುತ್ತಿದ್ದಾರೆ.vaikuntha-ekadashi-restriction-entrance-devotees-ontikoppal-venkateswara-temple

ನಿರ್ಭಂಧ ನಡುವೆಯು ದೇವಸ್ಥಾನಕ್ಕೆ ಭಕ್ತಸಮೂಹ ಆಗಮಿಸುತ್ತಿದ್ದು, ದೇವಸ್ಥಾನದ ಹೊರಭಾಗದಲ್ಲೇ ಪೂಜೆ ಸಲ್ಲಿಸಿ ಭಕ್ತರು ವಾಪಾಸಗುತ್ತಿದ್ದಾರೆ. ಪ್ರತಿ ಬಾರಿ ಸಾವಿರಾರು ಭಕ್ತರೊಂದಿಗೆ ವೈಕುಂಠ ಏಕದಾಶಿ ಆಚರಣೆ ಮಾಡಲಾಗುತ್ತಿತ್ತು. ಭಕ್ತರು ಹೆಚ್ಚಿ ಸೇರುವ ನಿರೀಕ್ಷೆಯಲ್ಲಿ ನಿನ್ನೆಯೆ ಸಾರ್ವಜನಿಕ ದರ್ಶನಕ್ಕೆ ನಿರ್ಭಂಧ ಹೇರಲಾಗಿದೆ.

Enlgish summary….

Vaikunta Ekadashi: Devotees entry to Venkateshwara temple in Ontikoppal restricted
Mysuru, Dec. 25, 2020 (www.justkannada.in): The entry of devotees to the famous Venkateshwara temple in Ontikoppal, Mysuru, has been restricted today on Vaikunta Ekadashi, as a precautionary measure to prevent the spread of the Corona pandemic.vaikuntha-ekadashi-restriction-entrance-devotees-ontikoppal-venkateswara-temple
The new Coronavirus strain, found in Britain, is spreading rapidly than the COVID-19 virus and hence, has increased panic across the world. Hence, precautionary measures are taken across the state. As a result of this, the entry of devotees to the Ontikoppal temple is restricted.
Key words: Vaikuntha Ekadashi – Restriction -Entrance -Devotees -ontikoppal Venkateswara Temple

Key words: Vaikuntha Ekadashi – Restriction -Entrance -Devotees -ontikoppal Venkateswara Temple