35 ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾ ವಾರಿಯರ್ಸ್‌ಗೆ ಲಸಿಕೆ ಪ್ರಯೋಗ- ಮೈಸೂರು ಡಿಹೆಚ್ಓ ಡಾ.ಅಮರ್ ನಾಥ್…

kannada t-shirts

ಮೈಸೂರು, ನವೆಂಬರ್,21,2020(www.justkannada.in): ಜನವರಿಯಲ್ಲಿ ಕೊರೋನಾಗೆ ಲಸಿಕೆ ಸಿಗುವ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಹಿತಿ ನೀಡಿವೆ. ಲಸಿಕೆ ಸಿಕ್ಕ ಬಳಿಕ ಪ್ರಾಯೋಗಿಕವಾಗಿ ಕೊರೋನಾ ವಾರಿಯರ್ಸ್‌ಗೆ ಲಸಿಕೆ ಪ್ರಯೋಗ ಮಾಡಲಾಗುತ್ತದೆ ಎಂದು ಮೈಸೂರು ಡಿಹೆಚ್ಓ ಡಾ.ಅಮರ್ ನಾಥ್ ಹೇಳಿದರು.kannada-journalist-media-fourth-estate-under-loss

ಮೈಸೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಮೈಸೂರು ಡಿಹೆಚ್‌ಓ ಡಾ.ಅಮರ್‌ನಾಥ್ , ಕೇಂದ್ರ , ರಾಜ್ಯ ಸರ್ಕಾರಗಳು ಜನವರಿಯಲ್ಲಿ ಲಸಿಕೆ ಸಿಗುವ ಬಗ್ಗೆ ಮಾಹಿತಿ ನೀಡಿವೆ. ಈ ಸಂಬಂಧ ಆರಂಭಿಕವಾಗಿ ಕೊರೋನಾ ವಾರಿಯರ್ಸ್‌ಗೆ ಲಸಿಕೆ ಪ್ರಯೋಗ ಮಾಡಲು ಚಿಂತನೆ ನಡೆಸಲಾಗಿದೆ‌ ಎಂದರು.

ಇನ್ನು ಮೈಸೂರಿನಲ್ಲಿ ಎಷ್ಟು ಮಂದಿ ಕೊರೋನಾ ವಾರಿಯರ್ಸ್‌ ಇದ್ದಾರೆಂದು ಮಾಹಿತಿ ಕೇಳಿದೆ. ಅದರಂತೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ 15,110 ಮಂದಿ ಕೊರೋನಾ ವಾರಿಯರ್ಸ್ ಇದ್ದಾರೆ. ಇನ್ನುಳಿದಂತೆ ಖಾಸಗಿ ಆಸ್ಪತ್ರೆಗಳಲ್ಲಿನ ಸಿಬ್ಬಂದಿಯನ್ನೂ ಕೌಂಟ್ ಮಾಡಲಾಗುತ್ತಿದೆ.Vaccine -trial - 35,000 Corona Warriors-Mysore DHO -Dr. Amarnath.

ಒಟ್ಟು 35 ಸಾವಿರಕ್ಕೂ ಹೆಚ್ಚು ಮಂದಿ ಕೊರೋನ ವಾರಿಯರ್ಸ್‌ಗೆ ಲಸಿಕೆ ಪ್ರಯೋಗ ಮಾಡಲಾಗುತ್ತದೆ. ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ಪ್ರಯೋಗಕ್ಕೆ ಸಿದ್ದತೆ ಮಾಡಲಾಗಿದ್ದು, ಲಸಿಕೆ ಬಂದ ಕೂಡಲೇ ಹಂತ ಹಂತವಾಗಿ ಪ್ರಯೋಗ ಮಾಡಲಾಗುತ್ತದೆ ಎಂದು ಡಿಹೆಚ್.ಓ ಡಾ. ಅಮರ್ ನಾಥ್ ಹೇಳಿದರು.

Key words: Vaccine -trial – 35,000 Corona Warriors-Mysore DHO -Dr. Amarnath.

website developers in mysore