ಯುವ ಬ್ರಿಗೇಡ್ ತಂಡದ ಶ್ರಮದಾನ : ಶ್ರೀ ಬಸವಪ್ಪ ಶಾಸ್ತ್ರಿಗಳ ಸ್ಮಾರಕವೀಗ ಸ್ವಚ್ಛ, ಸುಂದರ…

ಮೈಸೂರು,ಅಕ್ಟೋಬರ್,20,2020(www.justkannada.in) : ಬಹಳ ದಿನಗಳಿಂದ ನಿರ್ಲಕ್ಷ್ಕ್ಯಕ್ಕೆ ಒಳಗಾಗಿ ಅನಗತ್ಯ ಸಸ್ಯಗಳಿಂದ ಆವೃತಗೊಂಡಿದ್ದ ಕಾಳಿದಾಸ ಎಂದೇ ಪ್ರಸಿದ್ಧರಾಗಿದ್ದ ಶ್ರೀ ಬಸವಪ್ಪ ಶಾಸ್ತ್ರಿಗಳ ಸ್ಮಾರಕವನ್ನು ಯುವ ಬ್ರಿಗೇಡ್ ತಂಡದವರು ಸ್ವಚ್ಛಗೊಳಿಸಿದರು.

”ಕಾಯೋ ಶ್ರೀ ಗೌರಿ” ಅದ್ಭುತ ಗೀತೆಯ ರಚನಕಾರ

ಮೈಸೂರು ಸಂಸ್ಥಾನದ ಆಸ್ಥಾನ ಗೀತೆಯಾದ “ಕಾಯೋ ಶ್ರೀ ಗೌರಿ” ಎಂಬ ಅದ್ಭುತ ಗೀತೆಯನ್ನು ರಚಿಸಿದ ಅಭಿನವ ಕಾಳಿದಾಸ ಎಂದೇ ಪ್ರಸಿದ್ಧರಾಗಿದ್ದ ಶ್ರೀ ಬಸವಪ್ಪ ಶಾಸ್ತ್ರಿಗಳ ಸ್ಮಾರಕವು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳು ಬಿದ್ದಿತ್ತು.

ಸಾಮಾಜಿಕ ಜಾಲತಾಣದ ವೀಡಿಯೋ ನೋಡಿ ಪ್ರೇರಿತ

Uva Brigade-Team-Voice-Shri-Basavappa-Shastri-Memorial-beautiful“ಮೈಸೂರಿನ ಕಥೆಗಳು” ಖ್ಯಾತಿಯ ಧರ್ಮೇಂದ್ರ ಎಂಬುವರು ದಸರಾ ಸಂದರ್ಭದಲ್ಲೂ ಇದನ್ನು ಸ್ವಚ್ಛ ಮಾಡದೇ ಇರುವುದು ಮೈಸೂರಿಗರಿಗೆ ಶೋಭೆಯಲ್ಲ. ಇದನ್ನು ಯಾರಾದರೂ ಅಧಿಕಾರಿಗಳು, ಸಂಘ ಸಂಸ್ಥೆಗಳು ಗಮನಿಸಿ ಸ್ವಚ್ಚಗೊಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ವೀಡಿಯೋ ನೋಡಿ ಪ್ರೇರಿತರಾದ ಯುವ ಬ್ರಿಗೇಡ್ ತಂಡದ ಸದಸ್ಯರು ಸ್ಮಾರಕವನ್ನು ಸ್ವಚ್ಛಗೊಳಿಸಿ, ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನುಸುಕಿನ ಜಾವ 5.30 ಕ್ಕೆ ಸ್ಥಳಕ್ಕೆ ತೆರಳಿ ಸ್ವಚ್ಚತಾ ಕಾರ್ಯ

Uva Brigade-Team-Voice-Shri-Basavappa-Shastri-Memorial-beautiful

ಯುವ ಬ್ರಿಗೇಡ್ ತಂಡ ಇಂದು ನುಸುಕಿನ ಜಾವ 5.30 ಕ್ಕೆ ಸ್ಥಳಕ್ಕೆ ತೆರಳಿ ಸ್ವಚ್ಚತಾ ಕಾರ್ಯ ಕೈಗೊಂಡ 9 ಗಂಟೆಯವರೆಗೆ ಶ್ರಮದಾನ ಮಾಡಿ ಸ್ಮಾರಕದ ಸ್ವಚ್ಚತೆ ಮಾಡಲಾಯಿತು. ಬೆಳಗಿನ ಜಾವ  ಗಸ್ತಿನಲ್ಲಿದ್ದ ನರಸಿಂಹರಾಜ ಠಾಣೆ ಪೋಲಿಸರು ಏನಾಗುತ್ತಿದೆ ಎಂದು ವಿಚಾರಿಸಿ ಸ್ವಚ್ಚತಾ ಕಾರ್ಯಕ್ಕೆ ಸಹಕರಿಸಿದರು ಎಂದು ಯುವಾ ಬ್ರಿಗೇಡ್ ನ ಚಂದ್ರಶೇಖರ್ ಮಾಹಿತಿ ನೀಡಿದರು.

Uva Brigade-Team-Voice-Shri-Basavappa-Shastri-Memorial-beautiful

key words : Uva Brigade-Team-Voice-Shri-Basavappa-Shastri-Memorial-beautiful