ಸಾವಿನ ಬೂದಿ ಸಿಮೆಂಟ್ ತಯಾರಿಕೆಗೆ ಬಳಸುತ್ತಿರುವ ಆರೋಪ-ತುಮಕೂರು ಪರಿಸರ ಮಾಲಿನ್ಯ ಮಂಡಳಿಗೆ ಪತ್ರ ಬರೆದ ಮೈಸೂರಿನ ಪರಿಸರ ಮಾಲಿನ್ಯ ಮಂಡಳಿ…

ಮೈಸೂರು,ಜೂ,2221,2019(www.justkannada.in): ತಳೂರು ಗ್ರಾಮದಲ್ಲಿ ಬೂದಿಯಿಂದಾಗಿ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾವಿಗೆ ಕಾರಣವಾದ ಬೂದಿಯನ್ನ ಖಾಸಗಿ ಕಂಪನಿಯೊಂದು ಸಿಮೆಂಟ್ ತಯಾರಿಕೆಗೆ ಬಳಸುತ್ತಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ತುಮಕೂರು ಪರಿಸರ ಮಾಲಿನ್ಯ ಮಂಡಳಿಗೆ ಮೈಸೂರಿನ ಪರಿಸರ ಮಾಲಿನ್ಯ ಮಂಡಳಿ ಪತ್ರ ಬರೆದಿದೆ.

ಈ ಹಿಂದೆ ತಳೂರು ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಬೂದಿ ಸುರಿಯಲಾಗಿತ್ತು. ಆ ಬೂದಿಯಿಂದ  13 ವರ್ಷದ ಬಾಲಕನೋರ್ವ ಸಾವನ್ನಪ್ಪಿದ್ದ. ಈ ಸಂಬಂಧ ಬಾಲಕನ ಸಾವಿನ ಬಳಿಕ ಸಾವಿನ ಬೂದಿಯ ಬಗ್ಗೆ ತನಿಖೆ ನಡೆಸಲಾಗಿತ್ತು. ಈ ಬೂದಿ ಕೈಗಾರಿಕ ತ್ಯಾಜ್ಯದ ಬಂದಿತ್ತು ಎಂಬ ವಿಚಾರ ಬಹಿರಂಗವಾಗಿತ್ತು.

ಈ ನಡುವೆ ಕೈಗಾರಿಕಾ ತ್ಯಾಜ್ಯದಿಂದ ಬಂದ ಈ ಬೂದಿಯನ್ನ ಸಿಮೆಂಟ್ ತಯಾರಿಕೆಗೆ ಬಳಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ತುಮಕೂರಿನ ಖಾಸಗಿ ಸಿಮೆಂಟ್ ತಯಾರಿಕೆ ಕಂಪನಿ ಬಳಸುತ್ತಿದೆ ಎಂಬ ಶಂಕೆ ವ್ಯಕ್ತವಾಗಿದ್ದು  ಆರೋಪ ಕೇಳಿಬಂದ ಹಿನ್ನಲೆ ಎಚ್ಚೆತ್ತ ಮೈಸೂರು ಪರಿಸರ ಮಾಲಿನ್ಯ ಮಂಡಳಿ ತುಮಕೂರು ಪರಿಸರ ಮಾಲಿನ್ಯ ಮಂಡಳಿಗೆ ಪತ್ರ ಬರೆದು ಖಾಸಗಿ ಕಂಪನಿ ಪಡೆದಿರುವ ಬೂದಿ ಹಾಗೂ ಅದನ್ನ ಬಳಕೆ ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿ‌ ನೀಡಿವಂತೆ ಸೂಚಿಸಿದೆ.

ಇನ್ನು ದೂರವಾಣಿ ಮೂಲಕ  ಪ್ರಾಥಮಿಕ ಮಾಹಿತಿ ನೀಡುವಂತೆ ಮೈಸೂರು ಪರಿಸರ ಮಾಲಿನ್ಯ ಮಂಡಳಿ ಸೂಚಿಸಿದ್ದು ಏಪ್ರಿಲ್ ನಲ್ಲೇ ಪತ್ರ ನೀಡಿದೆ ಎನ್ನಲಾಗಿದೆ.

Key words: using -ash -cement -Mysore Environmental -Pollution Board-wrote- letter