ಉರಿಗೌಡ ಅಂದ್ರೆ ಅಶ್ವಥ್ ನಾರಾಯಣ್, ನಂಜೇಗೌಡ ಅಂದ್ರೆ ಸಿಟಿ ರವಿ- ಆದಿಚುಂಚನಗಿರಿ ಮಠದಲ್ಲಿ ಡಿ.ಕೆ ಶಿವಕುಮಾರ್ ವ್ಯಂಗ್ಯ.

kannada t-shirts

ಮಂಡ್ಯ,ಮಾರ್ಚ್,21,2023(www.justkannada.in):  ಉರಿಗೌಡ ಅಂದರೇ ಅಶ್ವಥ್ ನಾರಾಯಣ್, ನಂಜೇಗೌಡ ಅಂದರೇ ಸಿ.ಟಿ ರವಿ. ಇವು ಬಿಜಹೆಪಿಗರೇ ಸೃಷ್ಠಿಸಿದ ಪಾತ್ರಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದರು.

ನಾಗಮಂಗಲದ ಆದಿಚುಂಚನಗಿರಿ ಮಠಕ್ಕೆ ಕುಟುಂಬಸಮೇತರಾಗಿ ಡಿಕೆ ಶಿವಕುಮಾರ್ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್,  ಯಾವುದೇ ಒಂದು ಸಮುದಾಯಕ್ಕೆ ಧಕ್ಕೆ ತರಬಾರದು. ಒಕ್ಕಲಿಗರಿಗೆ ಅರಗಿಸಿಕೊಳ್ಳುವ ಶಕ್ತಿ ಇದೆ. ಆದರೆ ಒಕ್ಕಲಿಗ ಸಮುದಾಯಕ್ಕೆ ಕಳಂಕ ತರುವ ಕೆಲಸ ಮಾಡಬಾರದು.

ಈಗಾಗಲೇ ನಿರ್ಮಲಾನಂದ ಶ್ರೀಗಳು ಈ ಬಗ್ಗೆ ಮಾತನಾಡೊದ್ದಾರೆ. ಸಿನಿಮಾ ತೆಗೆಯುವ ನಿರ್ಧಾರದಿಂದ ಸಚಿವ ಮುನಿರತ್ನ ಹಿಂದೆ ಸರಿದಿದ್ದಾರೆ. ಇದನ್ನ ಇಲ್ಲಿಗೆ ನಿಲ್ಲಿಸಿದ್ರೆ ಒಳ್ಳೆಯದು ಇಲ್ಲದಿದ್ದರೇ  ಪಕ್ಷ ಬಿಟ್ಟು ಸಮುದಾಯದ ವ್ಯಕ್ತಿಗಾಗಿ ಹೋರಾಟ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.

Key words: Urigowda – Aswath Narayan-Nanjegowda –CT Ravi- DK Shivakumar-Adichunchanagiri Math

website developers in mysore