ಉಪ್ಪಿ-ರವಿಚಂದ್ರನ್ ಕಾಂಬಿನೇಷನ್ ಸಿನಿಮಾ ಶೂಟಿಂಗ್ ಶುರು

ಬೆಂಗಳೂರು, ಆಗಸ್ಟ್ 24, 2020 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ಲಾಕ್ ಡೌನ್ ಗೂ ಮೊದಲು ಘೋಷಣೆಯಾಗಿತ್ತು.

ಆ ಸಿನಿಮಾ ಈಗ ಚಿತ್ರೀಕರಣ ಪ್ರಾರಂಭಿಸಿದೆ. ಈ ಮೂಲಕ ಉಪ್ಪಿ ಹಾಗೂ ರವಿಚಂದ್ರನ್ ಫ್ಯಾನ್ಸ್ ಗೆ ಖುಷಿ ಸುದ್ದಿ ಸಿಕ್ಕಿದೆ.

ಅಂದಹಾಗೆ ಈ ಸಿನಿಮಾದ ಚಿತ್ರೀಕರಣಕ್ಕೆ ದಿನವೊಂದಕ್ಕೆ ಬರೋಬ್ಬರಿ 20 ಲಕ್ಷ ರೂ. ಖರ್ಚಾಗಲಿದೆಯಂತೆ. ಅದ್ಧೂರಿ ಸೆಟ್ ಗಳಲ್ಲಿ ಚಿತ್ರೀಕರಣವಾಗಲಿದೆ.

ಕನಕಪುರ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶಕರು.