ಉಪೇಂದ್ರ-ಆರ್.ಚಂದ್ರು ಕಾಂಬಿನೇಷನ್‍ ‘ಕಬ್ಜ’ಗೆ ಕ್ಲಾಪ್ ಮಾಡಿದ ಶಿವಣ್ಣ

ಬೆಂಗಳೂರು, ನವೆಂಬರ್ 22, 2019 (www.justkannada.in): ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಸ್ಟಾರ್ ನಿರ್ದೇಶಕ ಆರ್.ಚಂದ್ರು ಕಾಂಬಿನೇಷನ್‍ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಚಾಲನೆ ದೊರೆತಿದೆ.

ಕಂಠೀರವ ಸ್ಟುಡಿಯೋದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಬ್ರಹ್ಮ, ಐ ಲವ್ ಯು ಚಿತ್ರಗಳ ಯಶಸ್ಸಿನ ನಂತರ ಮತ್ತೊಮ್ಮೆ ಇವರಿಬ್ಬರ ಸಮಾಗಮದಲ್ಲಿ ಸೆಟ್ಟೇರುತ್ತಿರುವ ಈ ಕಬ್ಜ ಚಿತ್ರ ಏಳು ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಚಿತ್ರದ ಫಸ್ಟ್ ಲುಕ್‍ಅನ್ನು ಆನಂದ ಗುರೂಜಿ ಲೋಕಾರ್ಪಣೆ ಮಾಡಿದ್ದಾರೆ.