ಮತ್ತೆ ತೆಲುಗು ಚಿತ್ರ ರಂಗಕ್ಕೆ ರೀ ಎಂಟ್ರಿ ಕೊಟ್ಟ ಉಪ್ಪಿ

ಬೆಂಗಳೂರು, ಆಗಸ್ಟ್ 10, 2020 (www.justkannada.in): ನಟ ಉಪೇಂದ್ರ ಅವರು ಮತ್ತೆ ತೆಲುಗಿನ ಕಡೆಗೆ ಮುಖಮಾಡಿದ್ದಾರೆ ಎಂಬ ಸುದ್ದಿ ಬಂದಿದೆ.

ಅಂದಹಾಗೆ ‘ಬಾಕ್ಸರ್’ ಹೆಸರಿನ ಚಿತ್ರದಲ್ಲಿ ಉಪೇಂದ್ರ ನಟಿಸುವುದು ಬಹುತೇಕ ಖಚಿತವಾಗಿದೆ.

ಚಿತ್ರದಲ್ಲಿ ವರುಣ್ ತೇಜ್ ನಾಯಕನಾಗಿ ನಟಿಸಲಿದ್ದು, ಉಪೇಂದ್ರ ಈ ಚಿತ್ರದಲ್ಲಿ ಯಾವ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ಮಾತ್ರ ಕುತೂಹಲಕಾರಿಯಾಗಿದೆ.

ಈ ಹಿಂದೆಯೂ ಉಪೇಂದ್ರ ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸಿ, ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು.