ಯುಪಿ ಎಲೆಕ್ಷನ್ ಪ್ಲಾನ್! ಅಯೋಧ್ಯೆ ದೀಪೋತ್ಸವಕ್ಕೆ ಮೋದಿ ಚಾಲನೆ?

ಬೆಂಗಳೂರು, ಸೆಪ್ಟೆಂಬರ್ 09, 2021 (www.justkannada.in): ಪ್ರಧಾನಿ ನರೇಂದ್ರ ಮೋದಿ ಈ ವರ್ಷ ಅಯೋಧ್ಯೆಯಲ್ಲಿ 10 ದಿನಗಳ ದೀಪಾವಳಿ ಆಚರಣೆಯನ್ನು ಉದ್ಘಾಟನೆ ಮಾಡುವ ಸಾಧ್ಯತೆ ಇದೆ.

ನವೆಂಬರ್​ 3ರಂದು ನಡೆಯಲಿರುವ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಬಹುದು ಎನ್ನಲಾಗುತ್ತಿದೆ. ಈ ಹಿಂದೆ ವಿಜೃಂಭಣೆಯ ದೀಪೋತ್ಸವಕ್ಕೆ ಸಾಮಾನ್ಯವಾಗಿ ಸಿಎಂ ಯೋಗಿ ಆದಿತ್ಯನಾಥ್​ ಚಾಲನೆ ನೀಡುತ್ತಿದ್ದರು.

ಈಗಾಗಲೇ ಅಯೋಧ್ಯಾ ಅಭಿವೃದ್ಧಿ ಇಲಾಖೆ ಸೂಕ್ತ ತಯಾರಿ ಆರಂಭಿಸಿದೆ. ಈ ಬಾರಿ 6.5 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಗಿನ್ನೆಸ್​ ದಾಖಲೆ ಮಾಡಲು ಪ್ಲಾನ್ ಮಾಡಲಾಗಿದೆ.

ಆದರೆ ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡುವ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ.

key words: UP Election Plan! Modi’s drive to Ayodhya deepotsava