BREAKING NEWS : ಕೆ-ಸೆಟ್ ಪರೀಕ್ಷೆಗೆ ದಿನಾಂಕ ಫಿಕ್ಸ್

kannada t-shirts

ಮೈಸೂರು, ಆ.25,2020 ( www.justkannada.in news): ಉಪನ್ಯಾಸಕರ ಹುದ್ದೆ ಆಯ್ಕೆ ಸಂಬಂಧ ನಡೆಸುವ ” ಕೆ- ಸೆಟ್ ” ಪರೀಕ್ಷೆಗೆ ಕಡೆಗೂ ದಿನಾಂಕ ನಿಗಧಿ‌.

ಸೆ.20 ರಂದು KSET ಪರೀಕ್ಷೆ ನಡೆಸಲು ರಾಜ್ಯ ಸರಕಾರ ಮೈಸೂರು ವಿವಿಗೆ ಹಸಿರು ನಿಶಾನೆ ತೋರಿಸಿದೆ.

ಕೆಸೆಟ್ ಪರೀಕ್ಷೆ ಈ ಹಿಂದೆಯೇ ನಿಗಧಿಯಾಗಿತ್ತು. ಆದರೆ ಕೋವಿಡ್ ಕಾರಣದಿಂದ ಪರೀಕ್ಷೆ ನಡೆಸಲು ಸರಕಾರ ಅನುಮತಿ ನೀಡಿರಲಿಲ್ಲ.

ಈ ಸಂಬಂಧ ಮೈಸೂರು ವಿವಿ ಕುಲಪತಿ ಪ್ರೊ ‌ಹೇಮಂತ್ ಕುಮಾರ್, ಹಲ ಬಾರಿ ಸರಕಾರಕ್ಕೆ ಪತ್ರ ಬರೆದು ಪರೀಕ್ಷೆ ನಡೆಸಲು ದಿನಾಂಕ ನಿಗಧಿಗೆ ಮನವಿ ಮಾಡಿದ್ದರು.
ಇದೀಗ ಮೈಸೂರು ವಿವಿ ಮನವಿಗೆ ಸಕರಾತ್ಮಕವಾಗಿ ಸ್ಪಂಧಿಸಿರುವ ಸರಕಾರ, ಸೆ.೨೦ ರ ಭಾನುವಾರದಂದು ಪರೀಕ್ಷೆ ನಡೆಸಲು ಸೂಚಿಸಿದೆ.

KEY WORD : UOM- KSET – Exams- mysore. Sep.20.

website developers in mysore