ಮೇಡಂ ಟುಸ್ಸಾಡ್ಸ್​​ನಲ್ಲಿ ಕಾಜಲ್​ ಅಗರ್ವಾಲ್​ ಪ್ರತಿಮೆ ಅನಾವರಣ

kannada t-shirts

ಸಿಂಗಾಪುರ, ಫೆಬ್ರವರಿ 6, 2019 (www.justkannada.in): ನಟಿ ಕಾಜಲ್​ ಅಗರ್ವಾಲ್​ ಅವರ ಮೇಣದ ಪ್ರತಿಮೆ ಮೇಡಂ ಟುಸ್ಸಾಡ್ಸ್​​ನಲ್ಲಿ ಲೋಕಾರ್ಪಣೆಯಾಗಿದೆ.

ಹೌದು. ಸಿಂಗಪೂರ್​ನಲ್ಲಿರುವ ಮೇಡಂ ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಮ್ಯೂಸಿಯಂನಲ್ಲಿರೋ ಭಾರತದ ಗಣ್ಯರ ಸಾಲಿಗೆ ಇದೀಗ ದಕ್ಷಿಣ ಭಾರತದ ನಟಿ​ ಕೂಡ ಸೇರಿದ್ದಾರೆ.

ಕಾಜಲ್,​ ಪೋಷಕರು ಮತ್ತು ಸಹೋದರಿಯ ಜೊತೆ ಆಗಮಿಸಿ ಸ್ಟ್ಯಾಚೂ ಅನಾವರಣಗೊಳಿಸಿದ್ದಾರೆ. ಸದ್ಯ ಕಾಜಲ್, ಶ್ರೀದೇವಿ, ಅನುಷ್ಕಾ ಶರ್ಮಾ, ಪ್ರಭಾಸ್​, ಮಹೇಶ್​ ಬಾಬು ಮತ್ತು ಕರಣ್​ ಜೋಹರ್​ ಸಾಲಿಗೆ ಸೇರಿದ್ದಾರೆ.

ಇವರೆಲ್ಲರ ಮೇಣದ ಪ್ರತಿಮೆಗಳು ಈಗಾಗಲೇ ಮ್ಯೂಸಿಯಂನಲ್ಲಿ ಅನಾವರಣಗೊಂಡಿವೆ. ಇನ್ನು, ತಮ್ಮ ಮೇಣದ ಪ್ರತಿಮೆ ಜೊತೆ ಕಾಜಲ್​ ಪೋಸ್​ ಕೊಟ್ಟಿದ್ದು, ಆ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

website developers in mysore