ಉನ್ನಾವೋ ಅತ್ಯಾಚಾರ ಪ್ರಕರಣ: ಉಚ್ಛಾಟಿತ ಬಿಜೆಪಿ ಶಾಸಕ  ಕುಲ್ ದೀಪ್ ಸೆಂಗರ್ ಅಪರಾಧಿ ಎಂದು ಕೋರ್ಟ್ ತೀರ್ಪು ಪ್ರಕಟ…

ನವದೆಹಲಿ,ಡಿ,16,2019(www.justkannada.in):  ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉತ್ತರ ಪ್ರದೇಶದಲ್ಲಿ ನಡೆದಿದ್ದ ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛಾಟಿತ ಬಿಜೆಪಿ ಶಾಸಕ  ಕುಲ್ ದೀಪ್ ಸೆಂಗರ್ ಅಪರಾಧಿ ಎಂದು ತೀಸ್ ಹಜಾರಿ ಕೋರ್ಟ್  ತೀರ್ಪು ನೀಡಿದೆ.

ಐಪಿಸಿ ಸೆಕ್ಷನ್ 376 ಮತ್ತು ಪೊಕ್ಸೋ ಕಾಯ್ದೆಯಡಿ ಉಚ್ಛಾಟಿತ ಬಿಜೆಪಿ ಶಾಸಕ  ಕುಲ್ ದೀಪ್ ಸೆಂಗರ್ ಅಪರಾಧಿ ಎಂದು ನವದೆಹಲಿ ತೀಸ್ ಹಜಾರಿ ಕೋರ್ಟ್   ತೀರ್ಪು ನೀಡಿದೆ. ಹಾಗೆಯೇ  ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ವಿಳಂಬ ಹಿನ್ನೆಲೆ ಸಿಬಿಐ ಅನ್ನ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಇನ್ನು ಡಿಸೆಂಬರ್ 9 ರಂದು ಅಪರಾಧಿಗೆ  ಶಿಕ್ಷೆ ಪ್ರಮಾಣವನ್ನ ತೀಸ್ ಹಜಾರಿ ಕೋರ್ಟ್ ಪ್ರಕಟಿಸಲಿದೆ. 2017 ಜೂನ್ 4 ರಂದು ಅಪ್ರಾಪ್ತ ಬಾಲಕಿಯನ್ನ ಅಪಹರಿಸಿ ಅತ್ಯಾಚಾರವೆಸಗಲಾಗಿತ್ತು. ಪ್ರಕರಣದಲ್ಲಿ ಉಚ್ಛಾಟಿತ ಬಿಜೆಪಿ ಶಾಸಕ  ಕುಲ್ ದೀಪ್ ಸೆಂಗರ್ ಸೇರಿ ನಾಲ್ವರ ಹೆಸರು ಕೇಳಿ ಬಂದು ಪ್ರಕರಣ ದಾಖಲಾಗಿತ್ತು. 2018 ಏಪ್ರಿಲ್ 14 ರಂದು ಶಾಸಕ ಕುಲ್ ದೀಪ್ ಸೆಂಗರ್ ಬಂಧನವಾಗಿತ್ತು. ಈ ನಡುವೆ ಸಂತ್ರಸ್ತೆ ವಕೀಲರ ಭೇಟಿಗೆ ತೆರಳುತ್ತಿದ್ದ ವೇಳೆ  ದುಷ್ಕರ್ಮಿಗಳು ಸಂತ್ರಸ್ತೆಗೆ ಬೆಂಕಿ ಹಚ್ಚಿದ್ದರು, ನಂತರ ಆಸ್ಪತ್ರೆಗೆ ದಾಖಲಿಸಿದರೂ ಸಂತ್ರಸ್ತೆ ಸಾವನ್ನಪ್ಪಿದ್ದರು.  ಇದೀಗ ಪ್ರಕರಣ ಸಂಬಂಧ ಉಚ್ಛಾಟಿತ ಬಿಜೆಪಿ ಶಾಸಕ  ಕುಲ್ ದೀಪ್ ಸೆಂಗರ್ ಅಪರಾಧಿ ಎಂದು ತೀರ್ಪು ನೀಡಿದೆ.

key words: Unnao rape case- BJP MLAKul Deep Sengar- guilty- announces- court