ನಾಳೆಯಿಂದ ಅನ್’ಲಾಕ್ 4.0: ಚಿತ್ರಮಂದಿರಕ್ಕೆಅವಕಾಶ ಸಾಧ್ಯತೆ

ಬೆಂಗಳೂರು, ಜುಲೈ 18, 2021 (www.justkannada.in): ಜುಲೈ 19 ರ ನಂತರ ರಾಜ್ಯ ಸರಕಾರ ಸಂಪೂರ್ಣವಾಗಿ ಅನ್’ಲಾಕ್ ‌ ತೆರವು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೌದು. ರಾಜ್ಯದಲ್ಲಿ ನಾಳೆಯಿಂದ ಅನ್ ಲಾಕ್ 4.0 ಜಾರಿಗೆ ಬರಲಿದೆ. ಇಂದು ಸಿಎಂ ಯಡಿಯೂರಪ್ಪ ಹೊಸ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದೆ.

ಅಧಿಕೃತ ನಿವಾಸ ಕಾವೇರಿಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಇಂದು ಮಹತ್ವದ ಸಭೆ ನಡೆಯಲಿದೆ.

ಅನ್ ಲಾಕ್ 3.0 ಜಾರಿ ಮಾಡಿದ್ದು, ಬಸ್‌ , ಮೆಟ್ರೋ, ಮಾಲ್‌, ಬಾರ್‌, ಹೋಟೆಲ್‌, ರೆಸ್ಟೋರೆಂಟ್‌, ಖಾಸಗಿ ಕಚೇರಿ, ಧಾರ್ಮಿಕ ಸ್ಥಳಗಳು ಸೇರಿದಂತೆ ಹಲವು ವಲಯಗಳಿಗೆ ಅವಕಾಶವನ್ನು ನೀಡಲಾಗಿದೆ. ಆದ್ರೆ ಚಿತ್ರಮಂದಿರಗಳಿಗೆ ಅವಕಾಶ ದೊರಕಿಲ್ಲ. ಹೀಗಾಗಿ ಮುಂದಿನ ಅನ್‌ಲಾಕ್‌ ನಲ್ಲಿ ಚಿತ್ರಮಂದಿರಗಳು ತೆರೆಯುವ ಸಾಧ್ಯತೆಯಿದೆ.