ಕಾಂಗ್ರೆಸ್ ನಲ್ಲಿ ಈಗ ಸಿಎಂ ರೇಸ್ ನಲ್ಲಿ ನಾಲ್ವರು- ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ ಟೀಕೆ.

ಬೆಂಗಳೂರು,ಏಪ್ರಿಲ್,11,2023(www.justkannada.in): ಕಾಂಗ್ರೆಸ್ ನಲ್ಲಿ ಈಗ ನಾಲ್ವರು ಸಿಎಂ ರೇಸ್ ನಲ್ಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮೊದಲು ಸಿದ‍್ಧರಾಮಯ್ಯ ಮತ್ತು  ಡಿಕೆ ಶಿವಕುಮಾರ್ ಸಿಎಂ ರೇಸ್ ನಲ್ಲಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ, ಎಂ.ಬಿ ಪಾಟೀಲ್ ಇದ್ದಾರೆ. ಕಾಂಗ್ರೆಸ್​ನವರು 2 ಸಾವಿರ ರೂಪಾಯಿ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ, ಅದು ಕೇವಲ ಭರವಸೆ ಆಗಿರುತ್ತದೆ. ಬೇರೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಕೊಟ್ಟಿರುವ ಭರವಸೆಯ ಏನಾಯ್ತು? ಹಲವಾರು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಭರವಸೆ ಈಡೇರಿಸಿಲ್ಲ. ನಾವು ಗ್ಯಾರಂಟಿ ಅಂತ ಹೇಳಿಲ್ಲ, ಭರವಸೆ ಕೊಡುತ್ತಿಲ್ಲ. ಬಿಜೆಪಿ ಅಭಿವೃದ್ಧಿ ಆಧಾರದ ಮೇಲೆ ಪಾಸಿಟಿವ್ ಪ್ರಚಾರದ ಮೇಲೆ ಹೋಗಲು ನಿರ್ಧರಿಸಿದೆ  ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಯಾವಾಗ ಪಟ್ಟಿ ಪ್ರಕಟ ಮಾಡಬೇಕೆಂಬುದು ಕಾರ್ಯತಂತ್ರದ ಭಾಗ.  ಪಟ್ಟಿ ಬಿಡುಗಡೆ ಕುರಿತು ದೆಹಲಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದರು.

Key words: Union Minister -Shobha Karandhlaje- four candidates – CM race – Congress.