ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿ.

ನವದೆಹಲಿ,ಜೂನ್,25,2022(www.justkannada.in):  ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಇಡಿ ಸಮನ್ಸ್ ನೀಡಿರುವುದನ್ನ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅಮಿತ್ ಶಾ, ಎಸ್ ಐಟಿ ವಿಚಾರಣೆ ನಡೆಸುವಾಗ ಪ್ರಧಾನಿ ಮೋದಿ ಅವರು ಎಂಎಲ್ ಎಗಳು  ಎಂಪಿಗಳು ನನ್ನನ್ನ ಬೆಂಬಲಿಸಿ ಎನ್ನಲಿಲ್ಲ. ನನ್ನ ಬೆಂಬಲಿಸಿ ಧರಣಿ ನಡೆಸಿ ಎಂದು ಹೇಳಲಿಲ್ಲ. ಆದೆ ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆದ್ರೆ ಪ್ರತಿಭಟನೆ ಯಾಕೆ..?  ಎಂದು ಕಾಂಗ್ರೆಸ್ ಗೆ ಪ್ರಶ್ನಿಸಿದ್ದಾರೆ.

ಮೋದಿಜಿ ಎಸ್ ಐಟಿ ಮುಂದೆ ಹಾಜರಾಗಿ ವಿಚಾರಣೆಗೆ ಸಹಕರಿಸಿದರು. ಮೋದಿ ಎಲ್ಲಾ ಒತ್ತಡವನ್ನ ಮೌನವಾಗಿ ನಿರ್ವಹಿಸಿದರು. ಗೋದ್ರಾ ಗಲಭೆ ಕೇಸ್ ನಲ್ಲಿ ಏನು ಮುಚ್ಚಿಟ್ಟಿಲ್ಲ. ಮೋದಿ ತಮ್ಮ ನೋವು ಯಾರ ಬಳಿಯೂ ಹೇಳಲಿಲ್ಲ ಎಂದು ಅಮಿತ್ ಶಾ ತಿಳಿಸಿದರು.Home Minister- Amit Shah- praises- Prime Minister Modi

ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅಮಿತ್ ಶಾ,  ಕಾನೂನು ಸುವ್ಯವಸ್ಥೆ ರಾಜ್ಯಗಳ ಜವಾಬ್ದಾರಿ. ರಾಜ್ಯಗಳಿಗೆ ನೆರವು ಬೇಕಾದರೇ ಕೇಂದ್ರ ನೀಡುತ್ತೆ. ಕೇಂದ್ರದ ಭದ್ರತಾ ಪಡೆಗಳನ್ನ ರಾಜ್ಯಗಳಿಗೆ ಕಳಿಸುತ್ತೇವೆ ಎಂದರು.

Key words: Union -Home Minister -Amit Shah – Congress- protests -against -ED