ಬೆಂಬಲಿಸಬೇಕಾದ ರೈತಮುಖಂಡರೇ ಧರಣಿಗಿಳಿದಿರುವುದು ದುರದೃಷ್ಟಕರ- ಕೃಷಿ ಸಚಿವ ಬಿ.ಸಿ ಪಾಟೀಲ್…..

ಬೆಂಗಳೂರು,ಸೆಪ್ಟಂಬರ್,25,2020(www.justkannada.in):   ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣಾ ತಿದ್ಧುಪಡಿ ಕಾಯ್ದೆಯನ್ನು ರೈತರಿಗಾಗಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದನ್ನ ಬೆಂಬಲಿಸಬೇಕಾದ ರೈತ ಮುಖಂಡರೇ ಧರಣಿಗಿಳಿದಿರುವುದು ದುರದೃಷ್ಟಕರ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.jk-logo-justkannada-logo

ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣಾ ತಿದ್ಧುಪಡಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಸೆಪ್ಟಂಬರ್ 28 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಹಾಗೆಯೇ ಇಂದು ರೈತ ಸಂಘಟನೆಗಳ ವತಿಯಿಂದ ರೈತರು ರಾಜ್ಯಾದ್ಯಂತ ರಾಜ್ಯ ಮತ್ತು ರಾಷ್ಟ್ರ ಹೆದ್ಧಾರಿ ತಡೆದು ಆಕ್ರೋಶ ಹೊರಹಾಕಿದರು.unfortunate-farmer-protest-support-apmc-act-agriculture-minister-bc-patil

ಇನ್ನು ಸೆಪ್ಟಂಬರ್ 28 ರಂದು ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಬಿ.ಸಿ ಪಾಟೀಲ್, ನಮ್ಮ ಸರ್ಕಾರ ರೈತರ ಪರ ಸರ್ಕಾರ. ರೈತರಿಗಾಗಿ ಈ ಕಾಯ್ದೆ ಜಾರಿಗೆ ಮುಂದಾಗಿದ್ದೇವೆ. ಈ ಕಾಯ್ದೆಗಳಿಗೆ ರೈತ ಮುಖಂಡರೇ ಬೆಂಬಲ ಸೂಚಿಸಬೇಕಿತ್ತು. ಆದರೆ ಪ್ರತಿಭಟನೆಗಿಳಿದಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ.

Key words:  unfortunate – farmer –protest- support-APMC act-Agriculture Minister -BC Patil