ಗಣರಾಜ್ಯೋತ್ಸವ ದಿನದಂದೇ ಅಸ್ಸಾಂನಲ್ಲಿ ಎರಡು ಕಡೆ ಬಾಂಬ್ ಸ್ಫೋಟ

ದಿಬ್ರುಗರ್, ಜನವರಿ 26, 2019 (www.justkannada.in): ದೇಶದಾದ್ಯಂತ 71ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ನಡುವೆ ಅಸ್ಸಾಂ ರಾಜ್ಯದ 2 ಪ್ರದೇಶಗಳಲ್ಲಿ ಬಾಂಬ್ ಸ್ಫೋಟವಾಗಿದೆ.

ಅಸ್ಸಾಂ ನ ರಾಷ್ಟ್ರೀಯ ಹೆದ್ದಾರಿ 37ರ ಬಳಿಯಿರುವ ಗ್ರಹಮ್ ಬಜಾರ್ ಹಾಗೂ ಗುರುದ್ವಾರದ ದಿಬ್ರುಗರ್ ಪ್ರದೇಶಗಳಲ್ಲಿ ಸ್ಫೋಟ ಸಂಭವಿಸಿರುವುದಾಗಿ ಮೂಲಗಳು ತಿಳಿಸಿವೆ.

ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರುವುದಾಗಿ ವರದಿಗಳಾಗಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತಿ, ದಿಬ್ರುಗರ್ ಪ್ರದೇಶದಲ್ಲಿ ಸ್ಫೋಟವಾಗಿರುವ ಮಾಹಿತಿ ಬಂದಿದ್ದು, ತನಿಖೆ ಆರಂಭಗೊಂಡಿದ್ದೇವೆಂದು ಹೇಳಿದ್ದಾರೆ.