ಮೈಸೂರಿನಲ್ಲಿ ಎರಡು ಯೋಜನೆಗಳಿಗೆ ಚಾಲನೆ:  ಪ್ರಧಾನಿ ಮೋದಿ ಅವರ ಬಗ್ಗೆ ಸಿಎಂ ಬೊಮ್ಮಾಯಿ ಗುಣಗಾನ.

kannada t-shirts

ಮೈಸೂರು,ಜೂನ್,20,2022(www.justkannada.in): ಭಾರತದ ದಿಟ್ಟ ದೀಮಂತ ನಾಯಕ  ಪ್ರಧಾನಿ  ಮೋದಿ. ಅವರು ಅಧಿಕಾರಕ್ಕಾಗಿ ಎಂದೂ ರಾಜಕಾರಣ ಮಾಡಿದವರಲ್ಲ. ಮೋದಿ ಅವರದ್ಧು ಮಾನವೀಯ ರಾಜಕೀಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಗುಣಗಾನ ಮಾಡಿದರು.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ  ಕೇಂದ್ರದ ಯೋಜನೆಯ ಫಲಾನುಭವಿಗಳ ಜತೆಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ನಂತರ ಪ್ರಧಾನಿ ಮೋದಿ ಅವರಿಗೆ ಸಿಎಂ ಬೊಮ್ಮಾಯಿ ಪೇಟ ತೊಡಿಸಿ ಸನ್ಮಾನಿಸಿದರು.

ಈ ಮಧ್ಯೆ ನಾಗನಹಳ್ಳಿ ಕೋಚಿಂಗ್ ಟರ್ಮಿನಲ್ ಗೆ ಅಡಿಗಲ್ಲು,  ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಶ್ರೇಷ್ಠತಾ ಕೇಂದ್ರ ಎರಡು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು ಕಾಮಗಾರಿಗೆ ಚಾಲನೆ ನೀಡಿದರು.

ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲರ ಹೃದಯವನ್ನ ಗೆದ್ದ  ಪ್ರಧಾನಿ ಮೋದಿ ಜನಪರ ಯೋಜನೆಗಳನ್ನ ಜಾರಿ ಮಾಡಿದ್ದಾರೆ.  ಮೋದಿಗೆ ಮೈಸೂರು ಅಂದರೇ ಪ್ರೀತಿ.  ಯೋಗ ದಿನಕ್ಕೆ ಮೈಸೂರಿಗೆ ಬರಬೇಕೆಂದು ಆಸೆ ಹೊತ್ತಿದ್ದರು. ಬೇರೆ ಕಾರಣಗಳಿಂದ ಮೈಸೂರಿಗೆ ಬರಲಾಗಲಿಲ್ಲ.  ಈ ಬಾರಿ ಮಳೆ ಬಂದ್ರೂ ಪರವಾಗಿಲ್ಲ ಬರುವೆ. ಮೈಸೂರಿನಲ್ಲಿ ಯೋಗ ದಿನಾಚಾರಣೆಯಲ್ಲಿ ಪಾಲ್ಗೊಳ್ಳುವೆ ಎಂದಿದ್ದರು.

ಈ ದೇಶದಲ್ಲಿ  ಅಧಿಕಾರಕ್ಕಾಗಿ ರಾಜಕಾರಣ ನೋಡಿದ್ದೇವೆ. ಮೋದಿಯವರದ್ದು ದೇಶದ ಅಭಿವೃದ್ದಿಗಾಗಿ ಮಾತ್ರ ರಾಜಕಾರಣ.  ಹಿಂದಿನ ಪ್ರಧಾನಿಗಳು ಅಧಿಕಾರಕ್ಕಾಗಿ ರಾಜಕಾರಣ ಮಾಡಿದರು. ಈಗಿನ ಪ್ರಧಾನಿ ಅಧಿಕಾರಕ್ಕಾಗಿ ಎಂದೂ ರಾಜಕಾರಣ ಮಾಡಿದವರಲ್ಲ. ಮೋದಿ ಅವರಿಗೆ ಕಷ್ಟ ಸುಖ ಅವಮಾನ ಎಲ್ಲವೂ ಗೊತ್ತು.  ಮೋದಿಯವರದ್ದು ಮಾನವೀಯ ರಾಜಕೀಯ ಎಂದರು.

Key words: two projects –Mysore-pm modi- CM Bommai

website developers in mysore