ಆಂಧ್ರ ಮೂಲದ ಇಬ್ಬರು ಗಾಂಜಾ ಮಾರಾಟಗಾರರು ಅರೆಸ್ಟ್..

ಬೆಂಗಳೂರು,ಮೇ,30,2019(www.justkannada.in):  ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಸರ್ಜಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಶಿವ(20) ಮತ್ತು ಶಂಕರವ್ವ ಬಂಧಿತ ಆರೋಪಿಗಳು. ಬಂಧಿತರಿಂದ 2.3 ಲಕ್ಷ ಮೌಲ್ಯದ  8 ಕೆಜಿ ಗಾಂಜಾವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಬಂಧಿತ ಇಬ್ಬರು ಆರೋಪಿಗಳು ಕೇರಲಾ ತಮಿಳುನಾಡು, ಆಂಧ್ರ ಪ್ರದೇಶದಲ್ಲೂ ಜಾಲ ಹೊಂದಿದ್ದರು. ಈ ನಡುವೆ ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇವರನ್ನ ಸರ್ಜಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Two marijuana sellers of Andhra origin are Arrest.

#Bangalore #crimenews #marijuana #sellers #Arrest.