ಎರಡು ತಲೆ ಹಾವು ಮಾರಾಟಕ್ಕೆ ಯತ್ನ: ಆರೋಪಿ ಬಂಧನ…

ಕೊಡಗು,ಸೆಪ್ಟಂಬರ್,19,2020(www.justkannada.in): ಎರಡು ತಲೆ ಹಾವು ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.jk-logo-justkannada-logo

ಮೈಸೂರಿನ ಶಾಂತಿನಗರದ ನಿವಾಸಿ ಸೈಯದ್ ಮೋಮಿನ್ (22) ಬಂಧಿತ ಆರೋಪಿ. ಎರಡು ತಲೆ ಹಾವು ಎಂದು ಕರೆಯಲಾಗುವ ರೆಡ್​ ಸ್ಯಾಂಡ್​ ಬೋವಾ ಹಾವನ್ನ ಆರೋಪಿ  ಸೈಯದ್ ಮೋಮಿನ್ (22)  ಮಾರಾಟ ಮಾಡಲು ಯತ್ನಿಸಿದ್ದನು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಆನಂದಪುರದಲ್ಲಿ ಸೈಯದ್ ಮೋಮಿನ್. ಸಿಕ್ಕಿಬಿದ್ದಿದ್ದಾನೆ.two-headed-snake-sale-arrest-accused-kodagu

ಸೈಯದ್ ಮೋಮಿನ್ ಆನಂದಪುರ ಬಸ್ ನಿಲ್ದಾಣದಲ್ಲಿ  ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿದ್ದಾನೆ. ಸುಮಾರು ಒಂದು ಕೋಟಿಗೆ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದ ಎನ್ನಲಾಗಿದೆ. ಅನುಮಾನಗೊಂಡ ಅರಣ್ಯ ಸಂಚಾರಿ ದಳ ಪೊಲೀಸರು  ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Two-headed- snake – sale- arrest – accused-kodagu