ಸಂಜೆವರೆಗೂ ನಡುರಸ್ತೆಯಲ್ಲೇ ಶಾಲಾ ಮಕ್ಕಳನ್ನ ನಿಲ್ಲಿಸಿ ಸ್ನೇಹಿತರೊಂದಿಗೆ ಡ್ರಿಂಕ್ ಪಾರ್ಟಿ ಮಾಡಿದ  ಬಸ್ ಚಾಲಕ…

Promotion

ತುಮಕೂರು,ಅ,16,2019(www.justkannada.in):  ಸಂಜೆ ಶಾಲೆ ಬಿಟ್ಟ ಬಳಿಕ ಮಕ್ಕಳನ್ನ ಕರೆತಂದ ಶಾಲಾವಾಹನದ ಚಾಲಕ ಮಕ್ಕಳನ್ನ ಸಂಜೆವರೆಗೂ ನಡುರಸ್ತೆಯಲ್ಲೇ ನಿಲ್ಲಿಸಿ ಸ್ನೇಹಿತರೊಂದಿಗೆ ಕುಡಿತದ ಪಾರ್ಟಿ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಮಧುಗಿರಿ ಚಿರಕ್ ಪಬ್ಲಿಕ್ ಸ್ಕೂಲ್ ನ KA-52, 4456 ಬಸ್ ನ ಚಾಲಕ ಮಕ್ಕಳನ್ನ ಶಾಲೆಯಿಂದ ಮನೆಗೆ  ವಾಹನದಲ್ಲಿ ಕರೆತರುತ್ತಿದ್ದ.  ಈ ಮಧ್ಯೆ 4:30 ಕ್ಕೆ ಮಧುಗಿರಿ ಬಿಟ್ಟರೂ  15 ಕಿ.ಮೀ ದೂರವಿರುವ ಐಡಿ ಹಳ್ಳಿಗೆ ಶಾಲಾ ಬಸ್ ನಲ್ಲಿ ಮಕ್ಕಳನ್ನ ಕರೆದೊಯ್ಯಬೇಕಿತ್ತು. ಆದರೆ ಕುಡಿತಕ್ಕೆ ದಾಸನಾಗಿದ್ದ  ಬಸ್ ಚಾಲಕ, ನಡು ರಸ್ತೆಯಲ್ಲಿಯೇ ಸ್ಕೂಲ್ ಬಸ್ ಪಾರ್ಕ್ ಮಾಡಿ ಸ್ನೇಹಿತರೊಂದಿಗೆ ಕುಡಿಯುತ್ತ ಕುಳಿತಿದ್ದ.

ಇನ್ನೊಂದೆಡೆ ಸಂಜೆಯಾದರೂ ಮನೆಗೆ ಮಕ್ಕಳು ಬಾರದಿದ್ದಕ್ಕೆ ಪೋಷಕರು ಪರದಾಡಿದ್ದಾರೆ. ಮಕ್ಕಳನ್ನ ಪೋಷಕರು ಕಾಣದೆ ಕಂಗಾಲಾಗಿದ್ದು, ಹಾಗೆಯೇ ಶಾಲೆಯ ಸಿಬ್ಬಂದಿ ಸಹ ಗಾಬರಿಕೊಂಡಿದ್ದರು. ಇದಾದ ಬಳಿಕ ರಾತ್ರಿ 7:30 ಕ್ಕೆ ಬಸ್ ಚಾಲಕ ಮಕ್ಕಳನ್ನ ಕರೆತಂದು ಗ್ರಾಮಕ್ಕೆ ಬಿಟ್ಟಿದ್ದಾನೆ. ನಂತರ ಚಾಲಕ  ಗ್ರಾಮದಲ್ಲಿಯೇ ಬಸ್ ಬಿಟ್ಟು ಪರಾರಿಯಾಗಿದ್ದಾನೆ.

Key words:tumkur Bus driver –school-children-drink-friend