ಮದಲೂರು ಕೆರೆಗೆ ಹರಿಸಲಾಗುತ್ತಿದ್ಧ ಹೇಮಾವತಿ ನೀರು ಸ್ಥಗಿತ: ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ…

ತುಮಕೂರು,ಜನವರಿ,12,2021(www.justkannada.in):  ಶಿರಾ ಉಪಚುನಾವಣೆ ವೇಳೆ ಮದಲೂರು ಕೆರೆಗೆ ನೀರು ಹರಿಸುವ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿಟ್ಟುಕೊಂಡು ಬೈಎಲೆಕ್ಷನ್ ನಲ್ಲಿ ಗೆಲುವು ಸಾಧಿಸಿದ ರಾಜ್ಯ ಬಿಜೆಪಿ ಸರ್ಕಾರ ಇದೀಗ ಮದಲೂರು ಕೆರೆಗೆ ನೀರು ಹರಿಸುವುದನ್ನ ಸ್ಥಗಿತಗೊಳಿಸಿದೆ.jk-logo-justkannada-mysore

ಶಿರಾ ಉಪಚುನಾವಣೆ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ  ನೀಡಿದ್ದ ಭರವಸೆಯಂತೆ  ಕಳೆದ ನವೆಂಬರ್ 30 ರಂದು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲಾಗಿತ್ತು. ಮದಲೂರು ಕೆರೆಗೆ ನೀರು ಹರಿದು ಬಂದ ಹಿನ್ನೆಲೆ ಬಯಲುಸೀಮೆ ಜನ ಸಂತಸಗೊಂಡಿದ್ದರು.tumakur-shira-hemavathi-water-breaks-madalur-lake

ಆದರೆ ಇದು 40 ದಿನಕ್ಕೆ ಸೀಮಿತವಾಗಿದ್ದು, ದಿಢೀರೆಂದು ಏಕಾಏಕಿ ಮದಲೂರು ಕೆರೆಗೆ ಹರಿಸಲಾಗುತ್ತಿದ್ದ ಹೇಮಾವತಿ ನೀರನ್ನ ಸ್ಥಗಿತಗೊಳಿಸಲಾಗಿದೆ.  ಕೆರೆ ತುಂಬುವ ಮೊದಲೇ ನಾಲೆಯಲ್ಲಿ ನೀರು ಹರಿಯುವುದನ್ನು ಸ್ಥಗಿತಗೊಳಿಸಿರುವುದಕ್ಕೆ ಈ ಭಾಗದ  ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿದ್ದಾರೆ ಎನ್ನಲಾಗಿದೆ.

Key words: tumakur- shira-Hemavathi -water -breaks – Madalur lake.