ಕೊರೊನಾ ಸೋಂಕಿತರಿಗೆ ಚಿಕಿತ್ಸೆ: ಮೈಸೂರು ಮೂಲದ ವೈದ್ಯೆಗೆ ಅಮೆರಿಕಾ ಗೌರವ

Promotion

ವಾಷಿಂಗ್ಟನ್, ಏಪ್ರಿಲ್ 21, 2020 (www.justkannada.in): ಮೈಸೂರು ಮೂಲದ ಡಾ.ಉಮಾ ಮಧುಸೂದನ್  ಅವರಿಗೆ ಅಮೆರಿಕದ ಜನತೆ ಗೌರವ ಸಲ್ಲಿಸಿದ್ದಾರೆ.

ಅಮೆರಿಕದ ದಕ್ಷಿಣ ವಿಂಡ್ಸರ್ ಆಸ್ಪತ್ರೆಯಲ್ಲಿ ಡಾ.ಉಮಾ ಮಧುಸೂದನ್ ಅವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕೊರೊನಾ ಪೀಡಿತರಿಗೆ ಡಾ.ಉಮಾ ಅವರು ಚಿಕಿತ್ಸೆ ನೀಡುತ್ತಿದ್ದು, ಹಲವರು ಗುಣಮುಖರಾಗಿ ತೆರಳಿದ್ದಾರೆ.

ಪ್ರಸ್ತುತ ಕೊರೊನಾ ಪೀಡಿತರಿಗೆ ನೀಡಿದ ಸೇವೆಯನ್ನು ಮೆಚ್ಚಿ ಪೊಲೀಸರು, ಅಧಿಕಾರಿಗಳು ಹಾಗೂ ಜನ ಗೌರವ ಸಲ್ಲಿಸುತ್ತಿದ್ದಾರೆ.

ಇವರ ಸೇವೆಯನ್ನು ಮೆಚ್ಚಿ ಅಮೆರಿಕದಲ್ಲಿ ಅವರಿಗೆ ಭಾವಪೂರ್ಣ ಗೌರವ ಸಲ್ಲಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಡಾ.ಉಮಾ ಅವರ ಸೇವೆಯನ್ನು ಪ್ರಶಂಸಿಸಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.