ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರದ ನಡುವೆ ಬಸ್ ಸಂಚಾರ….  

kannada t-shirts

   ಬೆಂಗಳೂರು,ಏಪ್ರಿಲ್,17,2021(www.justkannada.in):  6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯದಲ್ಲಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 11ನೇ ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರ ಮುಷ್ಕರದ ನಡುವೆ ರಾಜ್ಯದಲ್ಲಿ ಕೆಲವು ಕಡೆಗಳಲ್ಲಿ ಸರ್ಕಾರಿ ಬಸ್ ಸಂಚಾರ ಮಾಡುತ್ತಿವೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ರಾಜ್ಯ ಸರ್ಕಾರ ಸಾರಿಗೆ ನೌಕರರ ಜತೆ ಮಾತುಕತೆಗೆ ಮುಂದಾಗದ ಹಿನ್ನೆಲೆ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಆದರೆ ಕೆಲವು ಕಡೆಗಳಲ್ಲಿ ಬಸ್ ಸಂಚಾರ ನಡೆಸುತ್ತಿವೆ. ಇಂದು 8 ಗಂಟೆಯ ವೇಳೆಗೆ ರಾಜ್ಯಾಧ್ಯಂತ 2,947 ಬಸ್ ಸಂಚಾರ ನಡೆಸಿವೆ ಎಂದು ಕೆ ಎಸ್ ಆರ್ ಟಿ ಸಿ ತಿಳಿಸಿದೆ.transport-workers-strike-state-11th-day

ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ಕೆ ಎಸ್ ಆರ್ ಟಿ ಸಿ,  ಕೆಎಸ್ ಆರ್ ಟಿಸಿಯ 1351 ಬಸ್,  ಬಿಎಂಟಿಸಿಯ 518 ಬಸ್ , ಎನ್ ಇಕೆಆರ್ ಟಿಸಿಯ 717 ಬಸ್,ಎನ್ ಡಬ್ಲ್ಯುಕೆಆರ್ ಟಿಸಿ 361 ಬಸ್ ಗಳು ಸೇರಿದಂತೆ ಒಟ್ಟು 2947 ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿರುವುದಾಗಿ ತಿಳಿಸಿದೆ.

Key words: transport workers – strike – state-11th day

 

website developers in mysore