ಸಾರಿಗೆ ನೌಕರರ ಮುಷ್ಕರ: ಮೈಸೂರಿನಲ್ಲಿ ಕೊರೋನಾ ಮರೆತು ಬಸ್ ಹತ್ತಲು ಮುಗಿಬಿದ್ಧ ಪ್ರಯಾಣಿಕರು….

Promotion

ಮೈಸೂರು,ಡಿಸೆಂಬರ್,11,2020(www.justkannada.in):  ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಏಕಾಏಕಿ ಸಾರಿಗೆ ನೌಕರರು ಮುಷ್ಕರ ಹೂಡಿದ ಹಿನ್ನೆಲೆ ರಾಜ್ಯದ ಹಲವು ಭಾಗಗಳಲ್ಲಿ ಸಾರಿಗೆ ಸಂಚಾರ ವ್ಯತ್ಯಯ ಉಂಟಾಗಿದೆ.logo-justkannada-mysore

ಈ ಮಧ್ಯೆ ಸಾರಿಗೆ ನೌಕರರ ಮುಷ್ಕರದ ಬಿಸಿ ಮೈಸೂರಿಗೂ ತಟ್ಟಿದೆ. ಮೈಸೂರಿನಲ್ಲೂ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಹಿನ್ನೆಲೆ  ನಗರದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.transport-employees-strike-mysore-passengers-bus

ಈ ಮಧ್ಯೆ ಕಡಿಮೆ ಸಂಖ್ಯೆಯಲ್ಲಿ ಬಸ್ ಸಂಚಾರವಿದ್ದು, ಬೆಂಗಳೂರಿಗೆ ತೆರಳುವ ಬಸ್ ಗೆ ಪ್ರಯಾಣಿಕರು ಮುಗಿಬಿದ್ದರು. ಕಾದು ಕಾದು ಒಂದು ಗಂಟೆಯ ಬಳಿಕ ಬಂದ ಬಸ್ ಗೆ ಹತ್ತಲು  ಪ್ರಯಾಣಿಕರು ಪರದಾಡಿದರು. ಕೊರೋನಾ ಮರೆತು ಪ್ರಯಾಣಿಕರು ಸಾಮಾಜಿಕ ಅಂತರವಿಲ್ಲದೇ ಬಸ್ ಗೆ ಹತ್ತಲು ಮುಗಿಬಿದ್ದ ಘಟನೆ ನಡೆಯಿತು.

Key words: Transport -Employees –Strike-mysore-passengers -bus