ಬೆಂಗಳೂರಿನಲ್ಲಿ  ಬಸ್ ನಿಲ್ದಾಣ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ…

kannada t-shirts

ಬೆಂಗಳೂರು,ಆ,5,2020(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್ ಕೊರತೆ ಉಂಟಾಗಿದೆ. ಈ ನಡುವೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ  ಪೀಣ್ಯಾ ಬಸ್ ನಿಲ್ದಾಣವನ್ನ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದೆ.jk-logo-justkannada-logo

ಕೆ.ಎಸ್ ಆರ್ ಟಿಸಿ ಸೋಂಕಿತ ನೌಕರರದ್ದೇ  ಬಗ್ಗೆ ಚಿಂತಿತವಾಗಿದ್ದ ಕೆ.ಎಸ್ ಆರ್ ಟಿಸಿ ಇದೀಗ ಪೀಣ್ಯ ಬಸ್ ನಿಲ್ದಾಣವನ್ನ  200 ಬೆಡ್  ಗಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದೆ.  ಈ ಕೋವಿಡ್ ಕೇರ್ ಸೆಂಟರ್ ಗೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಚಾಲನೆ ನೀಡಿದರು.  ಇನ್ನು ಕೆಎಸ್ ಆರ್ ಟಿಸಿ, ರೋಟರಿ ಅಡ್ವಿಕಾ ಕೇರ್ ಫೌಂಡೇಷನ್ ಮತ್ತು ನಯೋನಿಕಾ  ಐ ಟ್ರಸ್ಟ್ ಸಹಯೋಗದಲ್ಲಿ 10 ಬೆಡ್ ಗಳ ಐಸಿಯು ವ್ಯವಸ್ಥೆ ಮಾಡಲಾಗಿದೆ.transition-bus-stand-covid-care-center-bangalore

ಈ ನಡುವೆ  ಇಲ್ಲಿನ 200ಬೆಡ್ ಗಳ ಪೈಕಿ ಶೇ.50ರಷ್ಟು ಬೆಡ್ ಅನ್ನ ಸಾರಿಗೆ ಸಂಸ್ಥೆ ನೌಕರರಿಗೆ ಮೀಸಲಿಡಲಾಗಿದೆ. ಉಳಿದ ಶೇ. 50ರಷ್ಟು ಬೆಡ್ ಗಳನ್ನ  ಇತರೆ ರೋಗಳಿಗೆ ಬಳಸಲಾಗುವುದು.  ಹಾಗೆಯೇ ಸಂಜೀವಿನಿ ಮೊಬೈಲ್ ಕ್ಲೀನಿಕ್ ಗೆ ಚಾಲನೆ ನೀಡಲಾಗಿದೆ. ಒಂದು ಮಿನಿ ಬಸ್ ಅನ್ನ ಆಂಬ್ಯಲೆನ್ಸ್ ಆಗಿ ಪರಿವರ್ತನೆ ಮಾಡಲಾಗಿದೆ ಎಂದು ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ.

Key words: Transition-Bus stand- covid Care Center – Bangalore.

website developers in mysore