16 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ.

ಬೆಂಗಳೂರು,ಜೂನ್,27,2022(www.justkannada.in): 16 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿದ್ದ ಸಂಜೀವ್ ಎಂ ಪಾಟೀಲ್ ಅವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ (ಎಸ್​ಪಿ) ನೇಮಿಸಿ, ವರ್ಗಾವಣೆ ಮಾಡಿದೆ.

ಇನ್ನು ಜೋಶಿ ಶ್ರೀನಾಥ್ ಮಹಾದೇವ್ ಉಪ ಪೊಲೀಸ್ ಆಯುಕ್ತರು, ಆಗ್ನೇಯ ವಿಭಾಗ, ಬೆಂಗಳೂರು ನಗರ ಅವರನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜನೆ ಮಾಡಿದೆ.

ಬೆಂಗಳೂರು ನಗರ ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ  ಕೆ.ಎಂ. ಶಾಂತರಾಜು ಅವರನ್ನು ಪೊಲೀಸ್ ಅಧೀಕ್ಷಕರು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM)ಗೆ ವರ್ಗಾವಣೆ ಮಾಡಲಾಗಿದೆ.

ಸಿ.ಕೆ. ಬಾಬಾ – IPS (KN-2012) ಪೋಸ್ಟಿಂಗ್‌ ಗಾಗಿ ಕಾಯುತ್ತಿರುವವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಕಲಾ ಕೃಷ್ಣ ಸ್ವಾಮಿ ಅವರನ್ನು ಬೆಂಗಳೂರು ಪೂರ್ವ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರನ್ನಾಗಿ, ಹರೀಶ್ ಪಾಂಡೆ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಅಧೀಕ್ಷಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಲಕ್ಷ್ಮಣ ನಿಂಬರಗಿ ಅವರನ್ನು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, ಪಶ್ಚಿಮ ವಿಭಾಗ, ಬೆಂಗಳೂರು ನಗರ ಉಪಾಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ನಾಗೇಶ್ ಡಿಎಲ್  ಅವರನ್ನ ಪೊಲೀಸ್ ಅಧೀಕ್ಷಕರು, ಚಿಕ್ಕಬಳ್ಳಾಪುರಕ್ಕೆ ನಿಯೋಜಿಸಲಾಗಿದೆ.

ಲೋಕೇಶ ಭರಮಪ್ಪ ಜಗಲಸರ್  ಅವರನ್ನ ಪೊಲೀಸ್ ಅಧೀಕ್ಷಕರು, ಧಾರವಾಡಕ್ಕೆ ಪೋಸ್ಟ್ ಮಾಡಲಾಗಿದೆ. R. ಶ್ರೀನಿವಾಸ್ ಗೌಡ  ಅವರನ್ನ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, ಸೆಂಟ್ರಲ್ ಡಿವಿಷನ್, ಬೆಂಗಳೂರು ನಗರವನ್ನು ಪ್ರಸ್ತುತ ಖಾಲಿ ಇರುವ ಹುದ್ದೆಯಲ್ಲಿ ನಿಯೋಜಿಸಲಾಗಿದೆ.

ಜಿ.ಕೆ. ಮಿಥುನ್ ಕುಮಾರ್  ಅವರನ್ನ ಪೊಲೀಸ್ ಅಧೀಕ್ಷಕರು, ಅಪರಾಧ ತನಿಖಾ ಇಲಾಖೆ, ಬೆಂಗಳೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.  ಹರಿರಾಮ್ ಶಂಕರ್ ಅವರನ್ನ ಹಾಸನದ ಪೊಲೀಸ್ ಅಧೀಕ್ಷಕರಾಗಿ ನಿಯೋಜಿಸಲಾಗಿದೆ. ಜಯಪ್ರಕಾಶ್ ಬಾಗಲಕೋಟೆ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.

ಶೋಭಾ ರಾಣಿ ಅವರನ್ನ ಭ್ರಷ್ಟಾಚಾರ ವಿರೋಧಿ ಬ್ಯೂರೋ, ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಶಿವಾಂಶು ರಜಪೂತ್ ಹುಮನಾಬಾದ್ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.

Key words: Transfer – 16 -IPS -officers