ಸರ್ಕಾರದ ವಿರುದ್ಧ ಮಾತನಾಡಿದವರೆಲ್ಲಾ  ದೇಶದ್ರೋಹಿಗಳಾ..? ದಿಶಾ ರವಿ ಬಂಧನಕ್ಕೆ ಎಂ. ಲಕ್ಷ್ಮಣ್ ಕಿಡಿ……

ಮೈಸೂರು,ಫೆಬ್ರವರಿ,16,2021(www.justkannada.in): ದಿಶಾ ರವಿಯನ್ನ ದೆಹಲಿ ಪೊಲೀಸರು ಆಕ್ರಮವಾಗಿ ಬಂಧಿಸಿದ್ದಾರೆ. ನಮ್ಮ ಬೆಂಗಳೂರು ಪೊಲೀಸರ ಅನುಮತಿ ಪಡೆಯದೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಮ್ಮ ರಾಜ್ಯದವರನ್ನು ಸರ್ಕಾರ ಅಥವಾ ಪೊಲೀಸರ ಅನುಮತಿ ಪಡೆಯದೇ ಅರೆಸ್ಟ್ ಮಾಡಿರೋದು ದುರಂತ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶಾದ್ಯಂತ 800 ದೇಶದ್ರೋಹದ ಕೇಸ್ ಆಗಿದೆ. ಯಾವ ಕಾಲದಲ್ಲೂ ಇಷ್ಟೋಂದು ದೇಶದ್ರೋಹ ಕೇಸ್ ದಾಖಲಾಗಿರಲಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ದಿಶಾ ರವಿ ಬಂಧನ. ಸರ್ಕಾರದ ವಿರುದ್ಧ ಮಾತನಾಡಿದವರೆಲ್ಲಾ  ದೇಶದ್ರೋಹಿಗಳಾ..? ಎಂದು ಪ್ರಶ್ನಿಸಿದರು.

ದಿಶಾ ರವಿ ರೈತ ಕುಟುಂಬದಿಂದ ಬಂದವರು. ರೈತರ ಬೆಂಬಲ ಸೂಚಿಸಿದ್ದೇ ಇವರಿಗೆ ತೊಂದರೆಯಾಗಿದೆ. ಆ ಕಾರಣಕ್ಕಾಗಿ ಇವರನ್ನ ಬಂಧಿಸಿದ್ದಾರೆ. ಟೂಲ್ ಕಿಟ್ ಅನ್ನೊ ಹೊಸ ಪದ ಬಳಕೆ ಮಾಡಿ ಜನರಲ್ಲಿ ಗೊಂದಲ ಸೃಷ್ಠಿ ಮಾಡಿ ಹೆಣ್ಣು ಮಗಳನ್ನ ಬಂಧಿಸಿದ್ದಾರೆ. ಬಿಜೆಪಿಗೆ ಹೆಣ್ಣುಮಕ್ಕಳ ಮೇಲೆ ಗೌರವ ಇಲ್ಲ. ಈಗಾಲಾದರೂ ಯುವಕ, ಯುವತಿಯರು ಬಿಜೆಪಿ ವಿರುದ್ದ ಧ್ವನಿ ಎತ್ತಿ. ಮೊದಲು ಬಿಜೆಪಿಯವರ ಐಟಿ ಸೆಲ್, ಆರ್ ಎಸ್ಎಸ್ ಬ್ಯಾನ್ ಮಾಡಿ ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದರು.

ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ತಲೆಕೆಡಿಸಿಕೊಂಡಿಲ್ಲ.

2021ರ ರಾಜ್ಯ ಬಜೆಟ್ ತಯಾರಿ ಹಿನ್ನಲೆ ಈ ಕುರಿತು ಮಾತನಾಡಿದ ಎಂ.ಲಕ್ಷ್ಮಣ್, ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ತಲೆಕೆಡಿಸಿಕೊಂಡಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಸತತ 45ದಿನಗಳು ವಿವಿಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಯಡಿಯೂರಪ್ಪ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ. ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವಲ್ಲಿ ರಾಜ್ಯ ವಿಫಲವಾಗಿದೆ. ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗ್ತಾ ಇದ್ದಾರೆ ಎಂದು ಲೇವಡಿ ಮಾಡಿದರು.traitor-spoke- against - government - traitors –KPCC Spokesperson-m.Laxman-mysore

ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಮೈಸೂರಿಗೆ ಹೆಚ್ಚು ಅನುದಾನ ನೀಡಬೇಕು….

ಈ ಬಾರಿಯ ಕೇಂದ್ರದ ಬಜೆಟ್ ರಾಜ್ಯಕ್ಕೆ ಶೂನ್ಯ ಅನುದಾನ ನೀಡಿದೆ. ಪಕ್ಕದ ರಾಜ್ಯಕ್ಕೆ 6ಲಕ್ಷ ಕೋಟಿ ನೀಡಿದ್ದೀರಿ, ಅಲ್ಲಿಯ ಚುನಾವಣೆ ಮುಂದಿಟ್ಟುಕೊಂಡು ಹಣ ನೀಡಿದ್ದೀರಿ. ನಿಮ್ಮ ಅವಧಿಯಲ್ಲಿ ಮೈಸೂರಿಗೆ ಯಾವುದೇ ಅನುದಾನ ನೀಡಿಲ್ಲ. ಮೈಸೂರಿನ್ನು ಪಾರಂಪರಿಕ ನಗರ ಎಂದು ಘೋಷಣೆ ಮಾಡಬೇಕು. ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಮೈಸೂರಿಗೆ ಹೆಚ್ಚು ಅನುದಾನ ನೀಡಬೇಕು. ಮೈಸೂರಿನ ಸುತ್ತಮುತ್ತ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಿ ಎಂದು ಎಂ. ಲಕ್ಷ್ಮಣ್ ಒತ್ತಾಯಿಸಿದರು.

ಬೈಕ್ ಟಿವಿ ಫ್ರೀಡ್ಜ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಮೈಸೂರಿನಲ್ಲಿ ಈಗಾಗಲೇ ಇವೆಲ್ಲ ಇರೋರ ಪಟ್ಟಿಯನ್ನ ಸಿದ್ದ ಮಾಡುತ್ತಿರೊದು ನಮ್ಮ ಗಮನಕ್ಕೆ ಬಂದಿದೆ. ಬಿಜೆಪಿಯವರು ಯಾರದರೂ ಟಿವಿ ಇಲ್ಲದವರ ಮನೆಯನ್ನ ತೋರಿಸಿ. ಈ ಕಾನೂನು ತಂದ್ರೆ ದೇಶದ ಯಾವಬ್ಬನಿಗೂ ಬಿಪಿಎಲ್ ಕಾರ್ಡ್ ಇರೋದಿಲ್ಲ. ಈ ಹಿಂದೆ ನಮ್ಮ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾದಾಗ ಆರ್ ಎಸ್ ಎಸ್ ನವರು ಜನರನ್ನ ಬೀದಿಗಿಳಿಸಿದ್ರು. ಈಗ ಇಷ್ಟೆಲ್ಲಾ ಸಮಸ್ಯೆಯಿಂದ  ಜನ  ಬಳಲುತ್ತಿದ್ದರೂ ಜನ ಯಾರೂ ಸಹ ಚಕಾರ ಎತ್ತುತ್ತಿಲ್ಲ. ಮುಂದಿನ ದಿನಗಳಲ್ಲಿ ಜನ ಈ ವಿಚಾರವಾಗಿ  ಎಚ್ಚರಗೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್  ಕಿವಿಮಾತು ಹೇಳಿದರು.

Key words: traitor-spoke- against – government – traitors –KPCC Spokesperson-m.Laxman-mysore