ಮೈಸೂರು ವಿವಿ ಬಡವಾಣೆಗೆ ಭೇಟಿ ನೀಡಿ ಪರಿಶೀಲಿಸಿದ ಪಟ್ಟಣ ಪಂಚಾಯತ್ ಚೀಫ್ ಆಫಿಸರ್. ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಆಶ್ವಾಸನೆ.

ಮೈಸೂರು,ಸೆಪ್ಟಂಬರ್,1,2021(www.justkannada.in): ಮೈಸೂರು ವಿವಿ ಬಡವಾಣೆ ಮೂಡದಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರ್ಪಡೆಯಾಗಿದ್ದು, ಶ್ರೀರಾಂಪುರ ಪಟ್ಟಣ ಪಂಚಾಯತ್  ಚೀಫ್ ಆಫಿಸರ್ ಶ್ರೀಧರ್ ಬಡಾವಣೆಗೆ ಭೇಟಿ ನೀಡಿ ಮೂಡಾ ಸವಲತ್ತು ಪರಿಶೀಲನೆ ನಡೆಸಿದರು.

ಮೈಸೂರು ವಿವಿ ಕ್ಷೇಮಾಭಿವೃದ್ದಿ ಸಂಘ. ಅವರ ಮನವಿ ಮೇರೆಗೆ ಬಡಾವಾಣೆಯ ಸ್ಥಳ ಪರಿಶಿಲನೆ ನಡೆಸಿದ ಶ್ರೀಧರ್ ಅವರು, ಕಬಿನಿ ನೀರು ಪೂರೈಕೆ ಹಾಗೂ ಇತರೆ ಮೂಲಸೌಕರ್ಯಗಳನ್ನ ಕಲ್ಪಿಸುವ ಸಂಬಂಧ ಬಡವಾಣೆ ನಿವಾಸಿಗಳ ಜತೆ ಚರ್ಚಿಸಿದರು.

ರಸ್ತೆ, ಉದ್ಯಾನವನ ಯುಜಿಡಿ ಮುಂತಾದ ವ್ಯವಸ್ಥೆಗಳನ್ನ ಬಡಾವಣೆಯಲ್ಲಿ ಕಲ್ಪಿಸಲಾಗಿದೆ. ಇದಕ್ಕೆ ಪೂರಕವಾದಂತಹ ಅನುಕೂಲಗಳನ್ನು ಒದಗಿಸುವಂತೆ ಮೈಸೂರು ವಿವಿ ಕ್ಷೇಮಾಭಿವೃದ್ದಿ ಸಂಘದ, ನಿವೃತ್ತ ಪ್ರಾಧ್ಯಾಪಕ ಪ್ರೊ. ನಾಣಯ್ಯ ಅವರು  ಪಟ್ಟಣ ಪಂಚಾಯತ್  ಚೀಫ್ ಆಫಿಸರ್ ಶ್ರೀಧರ್  ಅವರಿಗೆ ಮನವಿ ಮಾಡಿದರು.

ಮನವಿ ಆಲಿಸಿ ಮಾತನಾಡಿದ ಶ್ರೀಧರ್,  ಈಗಷ್ಟೆ ಮೈಸೂರು ವಿವಿ ಬಡಾವಾಣೆ ಮೂಡಾದಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರ್ಪಡೆಯಾಗಿದೆ.  ಬಡಾವಣೆಗೆ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.

ಈ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ. ನಾಣಯ್ಯ, ಮೈಸೂರು ವಿವಿ ಬಡವಾಣೆಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಪಟ್ಟಣ ಪಂಚಾಯತ್ ಚೀಫ್ ಆಫಿಸರ್ ಶ್ರೀಧರ್ ಸಕಾರಾತ್ಮಕವಾಗಿದ್ದಾರೆ. ಬಡಾವಣೆಗೆ ಕಬಿನಿ ನೀರು ಪೂರೈಕೆಗೆ ಮನವಿ ಮಾಡಿದ್ದೇವೆ , ಲಿಂಗಾಬುದ್ದಿ ಕೆರೆ ಅಧ್ಯಯನ ಕೆರೆಗೆ ಯುಜಿಡಿ ನೀರು ಸೇರುತ್ತಿದೆ ಅದನ್ನ ತಪ್ಪಿಸುವಂತೆ ಮನವಿ ಮಾಡಲಾಗಿದೆ.  ಇಲ್ಲಿನ ರಸ್ತೆ, ಬೀದಿ ದೀಪ, ಚರಂಡಿ ವ್ಯವಸ್ಥೆ ಸುಸ್ಥಿತಿಯಲ್ಲಿದೆ ಎಂದು ತಿಳಿಸಿದರು.

ಈ ವೇಳೆ ಡಾ. ಗೋವಿಂದ ರಾಜ್,ಮನೋಹರ್, ಬಸವರಾಜ್,ಡಾ.ಬೇಚಮ್ಮ, ಸುಬ್ರಹ್ಮಣ್ಯ, ಕಾಂತರಾಜು, ಮತ್ತಿತರರು ಉಪಸ್ಥಿತರಿದ್ದರು.

Key words:  town panchayat- chief officer -visited – Mysore University Layout