ದೇಶದಲ್ಲಿ ಒಂದೇ ದಿನದಲ್ಲಿ ಹೊಸದಾಗಿ 3,68,147 ಕೋವಿಡ್ ಪ್ರಕರಣ ಪತ್ತೆ…

ನವದೆಹಲಿ,ಮೇ,3,2021(www.justkannada.in):  ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿದ್ದು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 3,68,147 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.jk

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದ್ದು,  ದೇಶದಲ್ಲಿ  ಒಂದೇ ದಿನದಲ್ಲಿ 3,68,147 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,99,25,604ಕ್ಕೆ ಏರಿಕೆಯಾಗಿದೆ.

ಹಾಗೆಯೇ ಕಳೆದ 24 ಗಂಟೆಗಲ್ಲಿ 3,417  ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 2,18,959 ಕ್ಕೆ ಏರಿಕೆಯಾಗಿದೆ.total-368147-new-cases-discovered-single-day

ಕಳೆದ 24 ಗಂಟೆಗಳಲ್ಲಿ 3,00,732 ಕೊರೊನಾ ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ದೇಶದಲ್ಲಿ 32 ಲ 34,13,642 ಕೊರೊನಾ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Key words : total – 3,68,147- new cases -discovered – single day.