ಭಾರತದ ಹೆಚ್ಚು ಜನಪ್ರಿಯ ಪ್ರವಾಸಿ ತಾಣಗಳು..

 

ಬೆಂಗಳೂರು, ಸೆ.04, 2021 : ಭಾರತದ ನಾಗರಿಕತೆಯು ಜಗತ್ತಿನ ಪುರಾತನ ನಾಗರಿಕತೆಗಳಲ್ಲಿ ಒಂದಾಗಿದೆ. ತನ್ನ ಶ್ರೀಮಂತ ಪರಂಪರೆ ಮತ್ತು ಅಸಂಖ್ಯಾತ ಆಕಷ೯ಣೆಗಳಿಂದ ಕೂಡಿದ ಭಾರತ ದೇಶವು ಜಗತ್ತಿನ ಮೂಲೆಮೂಲೆಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ಉತ್ತರದಲ್ಲಿ ಹಿಮಾಲಯ ಪವ೯ತ, ದಕ್ಷಿಣದಲ್ಲಿ ಮಹಾಸಾಗರ ಮತ್ತು ಮಳೆಕಾಡುಗಳಿಂದ ಆವರಿಸಿದ ಭಾರತ ದೇಶದ ಕೆಲವು ಜನಪ್ರಿಯ ಪ್ರವಾಸಿ ತಾಣಗಳನ್ನು ಗಮನಿಸೋಣ.

೧) ರಾಜಸ್ಥಾನ

ಭಾರತದ ವಾಯವ್ಯ ಭಾಗದಲ್ಲಿ ನೆಲೆಸಿರುವ ರಾಜಸ್ಥಾನವು ದೇಶದಲ್ಲಿಯೇ ದೊಡ್ಡದಾದ ರಾಜ್ಯವಾಗಿದೆ. ರಾಜಸ್ಥಾನವು ತನ್ನ ಸುಂದರವಾದ ಅರಮನೆಗಳು ಮತ್ತು ವಿಸ್ತಾರವಾದ ಮರಳುಗಾಡಿಗೆ ಪ್ರಸಿದ್ಧವಾಗಿದೆ. ರಾಜರ ಗತಕಾಲದ ವೈಭವ, ಸುಭದ್ರವಾದ ಕೋಟೆ, ವಿಭಿನ್ನವಾದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ ಈ ರಾಜ್ಯ ಪ್ರವಾಸಿಗರಿಗೆ ಮತ್ತು ಇತಿಹಾಸಕಾರರಿಗೆ ಮರೆಯಲಾಗದ ಅನುಭವಗಳನ್ನು ನೀಡುತ್ತದೆ.

ಇಂಥ ವೈವಿಧ್ಯಮಯವಾಗಿರುವ ರಾಜ್ಯದ ಕೆಲವು ನೋಡಲೇಬೇಕಾದ ಜನಪ್ರಿಯ ಸ್ಥಳಗಳೆಂದರೆ Pink City ಎಂದು ಕರೆಯಲ್ಪಡುವ ಜೈಪುರ್, ಜೋಧಪುರ್, ಉದೈಪುರ್, ಬಿಕಾನೇರ, ಜೈಸಲ್ಮೇರ್ ಮತ್ತು ರಣಥಂಬೋರ ರಾಷ್ಟ್ರೀಯ ಉದ್ಯಾನವನ. ಇವಲ್ಲದೇ ಥಾರ್ ಮರುಭೂಮಿಯಲ್ಲಿ ಒಂಟೆ ಸವಾರಿ, puppet show ಗಳನ್ನು enjoy ಮಾಡಬಹುದು. ಇಲ್ಲಿನ ಖಾದ್ಯಗಳಾದ ದಾಲ್ ಬಾಟಿ ಚೂಮಾ೯, ರಬ್ಡಿ, ಬಾಜ್ರೇಕಿ ರೋಟಿ, ಲಸೂಣ್ ಕಿ ಚಟ್ನಿ ಮತ್ತು ಬಿಕಾನೇರ್ ರಸಗುಲ್ಲಾಗಳನ್ನು ಖಂಡಿತವಾಗಿಯೂ ಸವಿಯಲೇ ಬೇಕು.

೨) ಹಿಮಾಚಲ ಪ್ರದೇಶ

ಚಿತ್ರ ಕೃಪೆ : ಇಂಟರ್ ನೆಟ್

ಪ್ರಕೃತಿ ಸೌಂದಯ೯ದಿಂದ ಶ್ರೀಮಂತವಾಗಿರುವ , ಯಾವಾಗಲೂ ಹಿಮದಿಂದ ಕೂಡಿರುವ ಪವ೯ತಗಳಿಂದ ಸುತ್ತುವರಿದ ಹಿಮಾಚಲ ಪ್ರದೇಶವು ತನ್ನ ವೈವಿಧ್ಯಮಯ ಪ್ರವಾಸಿ ತಾಣಗಳಿಂದಾಗಿ ಪ್ರವಾಸಿಗರನ್ನು ಆಕಷಿ೯ಸುತ್ತಿದೆ.
ಶಿಮ್ಲಾದ ಕ್ರೈಸ್ಟ್ ಚಚ೯, ಮನಾಲಿಯ ಮಾಲ್ ರೋಡ, “Little Switzerland of India” ಎಂದು ಕರೆಯಲ್ಪಡುವ ದಾಲಹೌಸಿ, ಸುಂದರವಾದ Tibetian Monastery ಗಳಿರುವ ಧಮ೯ಶಾಲಾ, Rohtang pass, ಸ್ಪಿಟಿ ವೆಲಿ, ದಾಲ್ ಲೇಕ್, ಹಡಿಂಬಾ ದೇವಿ ದೇವಸ್ಥಾನ, The Great Himalayan National Park ಹೀಗೆ ನೂರರು ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಇಲ್ಲಿನ ಪ್ರಮುಖ ಪ್ರವಾಸಿ ಚಟುವಟಿಕೆಗಳೆಂದರೆ ರಿವರ್ ರಾಫ್ಟಿಂಗ್, ಸ್ಕೀಯಿಂಗ್, ಪವ೯ತಾರೋಹಣ ಮತ್ತು ಪ್ಯಾರಾಗ್ಲೈಡಿಂಗ್.

೩) ಗೋವಾ

ಚಿತ್ರ ಕೃಪೆ : ಇಂಟರ್ ನೆಟ್

ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗೋವಾ ದೇಶದ ಅತಿ ಚಿಕ್ಕ ರಾಜ್ಯ. ಪೋಚು೯ಗೀಸರ ಆಡಳಿತಕ್ಕೆ ಒಳಪಟ್ಟಿದ್ದ ಗೋವಾದಲ್ಲಿ ಈಗಲೂ ಅದರ ಪ್ರಭಾವವನ್ನು ಕಾಣಬಹುದಾಗಿದೆ. ತನ್ನಲ್ಲಿರುವ ಸುಂದರವಾದ ಬೀಚ್ಗಳಿಂದಾಗಿ ಗೋವಾ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ರಜೆ ಅಥವಾ ವಿರಾಮದ ಸಮಯವನ್ನು ಅತ್ಯಾನಂದದಿಂದ ಕಳೆಯಬಹುದಾದ ತಾಣವಾಗಿದೆ. ಇಲ್ಲಿ ಹೆಚ್ಚು ಜನಪ್ರಿಯಲಾಗಿರುವ ಬೀಚ್ದಳೆಂದರೆ ಕ್ಯಾಂಡೋಲಿಮ್, ಕೋಲ್ವಾ, ಮೀರಾಮಾರ್, ಕಲಂಗುಟ್ ಮತ್ತು ಬಾಗಾ ಬೀಚ್ ಗಳು.

ಬಹುತೇಕ ಎಲ್ಲ ಬೀಚ್ ಗಳಲ್ಲಿ ಬಗೆ ಬಗೆಯ ಜಲಕ್ರೀಡೆಗಳಾದ ಜೆಟ್ ಸ್ಕಿ, ಬನಾನಾ ರೈಡ್ ಮತ್ತು ಪ್ಯಾರಸೇಲಿಂಗ ನಂತಹ ಆಟಗಳು ಲಭ್ಯವಿರುವುದರಿಂದ ನೀರಾಯಾಸವಾಗಿ ಅವುಗಳ ಮಜಾ ಸವಿಯಬಹುದು. ಬೀಚ್ ಗಳನ್ನು ಸುತ್ತಾಡುತ್ತಾ, ಶಾಪಿಂಗ್ ಮಾಡುತ್ತಾ, ರಸ್ತೆ ಬದಿಯಲ್ಲಿರುವ ಉಪಹಾರ ಗೃಹಗಳಲ್ಲಿ ಗೋವನ್ ಶೈಲಿಯ ಊಟದಿಂದ ಹಿಡಿದು continental ಶೈಲಿಯ ಊಟವನ್ನು ಸವಿಯಬಹುದು. ಕೇವಲ ಬೀಚ್ ಗಳಲ್ಲದೇ ಇಲ್ಲಿ ಪ್ರಸಿದ್ಧ ಹಿಂದೂ ದೇವಾಲಯಗಳನ್ನು ಮತ್ತು ಪೋಚು೯ಗೀಸ್ ಶೈಲಿಯ ಚಚ೯ಗಳನ್ನು ನೋಡಬಹುದು.

ಗೋವಾ ಕೂಡ ತನ್ನ casinos ಹೆಸರುವಾಸಿಯಾಗಿದೆ. ಆದರೆ ನೀವು ಮನೆಯಿಂದ casino games ಆಡಬಹುದು. ಅನೇಕ online casinos ಒಂದು ವೆಬ್ಸೈಟ್ betninjas ನಲ್ಲಿ ಲಿಸ್ಟ್ ಆಗಿದ್ದಾರೆ! ನೀವು ಅಲ್ಲಿ ಹೋಗಿ ನಿಮ್ ಪ್ರಕಾರ choose ಮಾಡ ಬಹುದು. ಭಾರತೀಯ ಆಟಗಾರರಿಗೆ ಈ ಆಟಗಳನ್ನು ಕಾನೂನುಬದ್ಧವಾಗಿ ಆನಂದಿಸಲು ಅನುವು ಮಾಡಿಕೊಡುತ್ತದೆ.

೪) ಕೇರಳ

‘God’s own country’ ಎಂದು ಕರೆಯಲ್ಪಡುವ ಕೇರಳ ತನ್ನ ಸುಂದರವಾದ ತೀರಗಳು, ಮನಮೋಹಕ ಹಿನ್ನೀರು ಮತ್ತು ಗಿರಿಧಾಮಗಳಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಪ್ರಶಾಂತಮಯ ಹಸಿರಿನ ವಾತಾವರಣ, ಎಲ್ಲೆಲ್ಲೂ ತೆಂಗಿನ ಮರಗಳು ಮತ್ತು ಆಕಷ೯ಕ ಕಡಲ ತೀರಗಳು ಪ್ರವಾಸಿಗರ ಮನಸ್ಸಿಗೆ ಆನಂದವನ್ನು ನೀಡುತ್ತವೆ. ಕುಮಾರಕಂ, ಕೊಲ್ಲಂ ಮತ್ತು ಅಲ್ಲೆಪ್ಪಿಯಲ್ಲಿರುವ ಹಿನ್ನೀರಿನ ತಾಣಗಳಲ್ಲಿ ದೋಣಿ ಪ್ರಯಾಣವು ವಿಶಿಷ್ಟ ಅನುಭವವನ್ನು ನೀಡುತ್ತವೆ. ಇಲ್ಲಿರುವ ಹೌಸಬೋಟಗಳು ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದ್ದು ತಂಗುದಾಣವಾಗಿ ಕಾಯ೯ನಿವ೯ಹಿಸುತ್ತವೆ.

ಚಿತ್ರ ಕೃಪೆ : ಇಂಟರ್ ನೆಟ್

ಕೊವಲಂ, ವಕ೯ಲಾ, ಪಯ್ಯಾಂಬಲು ಮುಂತಾದ ಆಕಷ೯ಕ ಕಡಲ ತೀರಗಳನ್ನು ನೋಡಬಹುದು. ಮುನ್ನಾರ, ತೆಕ್ಕಡಿ, ಪೀಮೆ೯ಡೆ ಹೀಗೆ ಹಲವು ಜನಪ್ರಿಯವಾದ ಗಿರಿಧಾಮಗಳಿವೆ. ಗುರುವಾಯುರ್ ಮತ್ತು ತಿರುವನಂತಪುರಂ ದೇವಸ್ಥಾನಗಳಿಗೆ ದೇಶಾದ್ಯಂತ ಭಕ್ತಾದಿಗಳು ದಶ೯ನ ಪಡೆಯಲು ಬರುತ್ತಾರೆ. ಕೇರಳದ ‘snake boat race’ ಅತ್ಯಂತ ಜನಪ್ರಿಯವಾಗಿದ್ದು ಬಹಳ ಪ್ರವಾಸಿಗರನ್ನು ಆಕಷ೯ಸುತ್ತದೆ.

೫) ರಣ್ ಆಫ ಕಚ್

ಥಾರ್ ಮರುಭುಮಿಯ ಒಂದು ಭಾಗವಾದ ರಣ್ ಆಫ ಕಚ್ ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಮಾನ್ಯತೆ ಪಡೆದಿರುವ ಪ್ರದೇಶವಾಗಿದೆ. 10,000 ಚ.ಕಿ.ಮೀ ಗಳಷ್ಟು ವಿಶಾಲವಾಗಿ ಆವರಿಸಿರುವ ಈ ಉಪ್ಪಿನ ಪ್ರದೇಶವನ್ನು ಕಂಡಾಗ ಕಣ್ಣು ಹಾಯಿಸಿದಷ್ಟೂ ಸಮತಟ್ಟಾದ ಮಂಜಗಡ್ಡೆಯ ಭೂಮಿ ಆವರಿಸಿದಂತೆ ಭಾಸವಾಗುತ್ತದೆ. “ಗ್ರೇಟರ್ ರಣ್ ಆಫ್ ಕಚ್” ಜಗತ್ತಿನ ಅತಿ ದೊಡ್ಡ ಉಪ್ಪು ಮರಭೂಮಿಯಾಗಿದೆ.

ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಗುಜರಾತ್ ಪ್ರವಾಸೋದ್ಯಮ ಇಲಾಖೆಯಿಂದ “ರಣ್ ಉತ್ಸವ” ವನ್ನು ಆಚರಿಸಲಾಗುತ್ತದೆ. ರಣ್ ಉತ್ಸವದ ಸಮಯದಲ್ಲಿ ಕೃತಕ ಟೆಂಟ್ ಗಳನ್ನು ನಿಮಿ೯ಸಲಾಗುತ್ತದೆ ಮತ್ತು ಪ್ರವಾಸಿಗರು ಟೆಂಟ್ ಗಳಲ್ಲಿ ನೆಲೆಸಿ ರಾತ್ರಿಯ ಸಮಯವನ್ನು ಸುಂದರವಾದ ಬೆಳದಿಂಗಿಳಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸವಿಯುತ್ತ ಅನುಭವಿಸಬಹುದು. ಬಲು ಅಪರೂಪದ “ವೈಲ್ಡ್ ಆಸ್” ಅಥವಾ ಕಾಡುಗತ್ತೆಯನ್ನು ಇಲ್ಲಿ ನೋಡಬಹುದು. ಅಲ್ಲದೆ ಪಕ್ಷಿ ವೀಕ್ಷಣೆಗೂ ಈ ಪ್ರದೇಶ ಅತ್ಯಂತ ಹೆಸರುವಾಸಿಯಾಗಿದೆ.

 

key words : top-tourist-places-in-India