ಎಲ್ಲರ ಬಾಯಲ್ಲೂ ಟೂಲ್‌ ಕಿಟ್ ಮಾತುಗಳು: ಹಾಗಾದರೇ ಟೂಲ್‌ ಕಿಟ್ ಅಂದರೇನು? ಇಲ್ಲಿದೆ ವಿವರ…

ಬೆಂಗಳೂರು,ಫೆಬ್ರವರಿ, 16,2021(www.justkannada.in): ಕೇಂದ್ರ ಸರ್ಕಾರದ ತಿದ್ದುಪಡಿ ಮಾಡಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತರು ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತಂತೆ ದೆಹಲಿ ಪೊಲೀಸರು ಟೂಲ್‌ ಕಿಟ್ ಒಂದರ ಕುರಿತು ಪ್ರಸ್ತಾಪಿಸಿ, ಬೆಂಗಳೂರು ಮೂಲದ ಹವಾಮಾನ ಬದಲಾವಣೆ ಕಾರ್ಯಕರ್ತೆ ದಿಶಾ ರವಿ ಎಂಬ ಯುವತಿಯನ್ನು ಫೆಬ್ರವರಿ 14ರಂದು ಬಂಧಿಸಿದರು.jk

ಫೆಬ್ರವರಿ 3ರಂದು ಗ್ರೆಟಾ ಥನ್‌ಬರ್ಗ್ ಎಂಬ ಹೆಸರಿನ ಸ್ವೀಡನ್ ಮೂಲದ ಹವಾಮಾನ ಬದಲಾವಣೆ ಕಾರ್ಯಕರ್ತೆ ಸಾಮಾಜಿಕ ಜಾಲತಾಣವೊಂದರಲ್ಲಿ ಒಂದು ಟ್ವೀಟ್ ಮಾಡುವ ಮೂಲಕ ಈ ಟೂಲ್‌ ಕಿಟ್ ಮೊದಲ ಬಾರಿಗೆ ಗಮನ ಸೆಳೆಯಿತು, ಆದರೆ ಆಕೆ ಅದನ್ನು ಸ್ವಲ್ಪ ಸಮಯದ ನಂತರ ಡಿಲೀಟ್ ಮಾಡಿದ್ದರು. ಈ ಸಂಬಂಧ ಭಾರತದಲ್ಲಿ ಆಡಳಿತ ಪಕ್ಷದವರು ಹಾಗೂ ಅವರ ಬೆಂಬಲಿಗರು, ಭಾರತಕ್ಕೆ ಅಗೌರವ ತರುವ ಉದ್ದೇಶದಿಂದ ಗ್ರೆಟಾ ಥನ್‌ಬರ್ಗ್ ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ಆದರೆ ನಿಖರವಾಗಿ ಟೂಲ್‌ಕಿಟ್ ಎಂದರೇನು ಹಾಗೂ ರೈತರ ಪ್ರತಿಭಟನೆಗೂ ಅಥವಾ ದಿಶಾಳ ಬಂಧನಕ್ಕೂ ಏನು ಸಂಬಂಧ?

ಹೆಸರೇ ಸೂಚಿಸುವಂತೆ ಟೂಲ್‌ ಕಿಟ್ ಎಂದರೆ, ನಿರ್ದಿಷ್ಟವಾದ ಉದ್ದೇಶವೊಂದಕ್ಕೆ ಬಳಸುವ ಸಾಧನಗಳು. ಗಣಕಯಂತ್ರ ಅಥವಾ ಸಾಫ್ಟ್ವೇರ್ ಭಾಷೆಯಲ್ಲಿ ಟೂಲ್‌ ಕಿಟ್ ಎಂದರೆ ಸಾಫ್ಟ್ವೇರ್ ಸಾಧನಗಳ ಒಂದು ಸೆಟ್. ಇದನ್ನು, ಏನಾದರೂ ಒಂದು ಕೆಲಸ ಪೂರ್ಣಗೊಳಿಸುವ ಸಲುವಾಗಿ ಸಿದ್ಧಪಡಿಸಿರುವಂತಹ ಮಾರ್ಗಸೂಚಿಗಳು, ನಿರ್ದೇಶನಗಳು ಅಥವಾ ಸೂಚನೆಗಳು ಎಂದೂ ಉಲ್ಲೇಖಿಸಲಾಗುತ್ತದೆ. ಟೂಲ್‌ ಕಿಟ್ ಯಾವುದಾದರು ಒಂದು ಕಾರ್ಯೋದ್ದೇಶವನ್ನು ಕೈಗೊಳ್ಳಬೇಕಾಗಿರುವ ಸೂಚನೆಗಳನ್ನು ಒಳಗೊಂಡಿರುವ ಒಂದು ದಾಖಲೆ (ಡಾಕ್ಯೂಮೆಂಟ್) ಅಥವಾ ಕೈಪಿಡಿಯಾಗಿರಬಹುದು. ನಿರ್ದಿಷ್ಟವಾದ ವಿಷಯವೊಂದರ ಕುರಿತು ಮಾಹಿತಿಯನ್ನೂ ಒಳಗೊಂಡಿರಬಹುದು. ಪ್ರತಿಭಟನೆಗಳಿಗೆ ಸಂಬಂಧಟಪ್ಟಂತೆ ಹೇಳುವುದಾದರೆ ಒಂದು ಟೂಲ್‌ಕಿಟ್ ಎಂದರೆ ಪ್ರತಿಭಟನೆ ನಡೆಸುವ ರೀತಿಯ ವಿವರಗಳನ್ನು ಒಳಗೊಂಡಿರುವ ಕ್ರಿಯಾ ಯೋಜನೆ ಎನ್ನಬಹುದು.

ಗ್ರೆಟಾ ಥನ್‌ಬರ್ಗ್ ಟ್ವಿಟ್ಟರ್‌ನಲ್ಲಿ ಯಾವ ಟೂಲ್‌ ಕಿಟ್ ಅನ್ನು ಶೇರ್ ಮಾಡಿದರು?

ಆರಂಭದಲ್ಲಿ ಥನ್‌ಬರ್ಗ್, ಓರ್ವ ಪ್ರಸಿದ್ಧ ಬರ್ಬಾಡಿಯನ್ ಪಾಪ್ ಗಾಯಕಿ ರಿಹಾನ್ನಳಂತೆ, ಭಾರತದಲ್ಲಿ ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸುವ ಸುದ್ದಿ ಲೇಖನವೊಂದನ್ನು ಶೇರ್ ಮಾಡುವ ಮೂಲಕ ಟ್ವೀಟ್ ಮಾಡಿದರು. ಸ್ವಲ್ಪ ಸಮಯದ ನಂತರ ಆಕೆ ಸಂದೇಶವೊಂದನ್ನು ಟ್ವೀಟ್ ಮಾಡುತ್ತಾಳೆ, ಅದೇನೆಂದರೆ: “ನಿಮಗೆ ಸಹಾಯ ಮಾಡಬೇಕೆಂದೆನಿಸಿದರೆ ಇಲ್ಲಿ ಒಂಟು ಟೂಲ್‌ಕಿಟ್ ಇದೆ.” ಈ ಟೂಲ್‌ಕಿಟ್ ಭಾರತದ ಖಲಿಸ್ತಾನ್ ಪರವಾದ ‘ಪೊಯೆಟಿಕ್ ಜಸ್ಟೀಸ್ ಫೌಂಡೇಷನ್’ಗೆ ಸಂಬAಧಪಟ್ಟಿದೆ ಎಂದು ತಿಳಿದು ಬಂದ ಕೂಡಲೇ ದೊಡ್ಡ ವಿವಾದ ಸೃಷ್ಟಿಯಾಯಿತು. ಆಗ ಥನ್‌ಬರ್ಗ್ ಕೂಡಲೇ ಆ ಟೂಲ್‌ಕಿಟ್ ಅನ್ನು ಅಪ್‌ಲೋಡ್ ಮಾಡಿದ್ದಂತಹ ಸಾಮಾಜಿಕ ಜಾಲತಾಣದಲ್ಲಿ ‘ಔಟ್‌ಡೇಟೆಡ್’ ಎಂದು ಹೇಳಿ ‘ಡಿಲೀಟ್’ ಮಾಡಿ, ಮತ್ತೊಂದು ಟ್ವೀಟ್ ಮಾಡಿದರು.

ಆ ಟೂಲ್‌ಕಿಟ್‌ನಲ್ಲಿ ಅಂಥದ್ದೇನಿತ್ತು?

ದೆಹಲಿ ಪೊಲೀಸರ ಪ್ರಕಾರ, ಆ ಟೂಲ್‌ಕಿಟ್ ಜನವರಿ ೨೬ರಂದು ರೂಪಿಸಲ್ಪಟ್ಟಿದ್ದಂತಹ ‘ಡಿಜಿಟಲ್ ಹೋರಾಟ’ದ ಕ್ರಿಯಾ ಅಂಶಗಳು ಹಾಗೂ ಇದಕ್ಕೂ ಮುಂಚಿತವಾಗಿ ಜನವರಿ ೨೩ರಿಂದಲೇ ‘ಟ್ವೀಟ್‌ಗಳ ಸುರಿಮಳೆ’ಯನ್ನು ಆರಂಭಿಸುವುದು, ಜನವರಿ ೨೬ರಂದು ಕೈಗೊಳ್ಳಬೇಕಿರುವ ಭೌತಿಕ ಕ್ರಿಯೆ ಹಾಗೂ ರೈತರ ಜಾತಾಕ್ಕಾಗಿ ದೆಹಲಿಯನ್ನು ಪ್ರವೇಶಿಸುವುದು ಹಾಗೂ ಪುನಃ ಬಾರ್ಡರ್‌ಗೆ ತೆರಳುವುದು (ಪ್ರತಿಭಟನೆ ನಡೆಯುವ ಸ್ಥಳ), ಈ ಅಂಶಗಳನ್ನು ಒಳಗೊಂಡಿತ್ತು. ಮುಂದುವರೆದು, ‘ಯೋಗ’ ಹಾಗೂ ‘ಟೀ’ಗಳಂತಹ ಭಾರತದ ಸಾಂಪ್ರದಾಯಿಕ ಪರಂಪರೆಗಳಿಗೆ ಕೆಟ್ಟ ಹೆಸರು ತರುವಂತಹ ಕೆಲಸಗಳನ್ನು ಮಾಡುವುದು ಹಾಗೂ ವಿದೇಶಗಳಲ್ಲಿ ಭಾರತೀಯ ರಾಯಭಾರಿ ಕಚೇರಿಗಳನ್ನು ಗುರಿಯಾಗಿಸುವಂತಹ ಕೆಲವು ಅಂಶಗಳನ್ನು ಒಳಗೊಂಡಿತ್ತು.

ಅದು ಸರಿ. ಆದರೆ ಟೂಲ್‌ಕಿಟ್‌ಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಬೆಂಗಳೂರಿನ ದಿಶಾ ರವಿಯವರನ್ನು ಏಕೆ ಬಂಧಿಸಿದರು?

Tool kit -word - everyone's- mouth-what is the Tool Kit?-  detail.
ಕೃಪೆ-internet

ಥನ್‌ಬರ್ಗ್ ಅವರು ಟ್ವೀಟ್ ಮಾಡಿದ ನಂತರ, ದೆಹಲಿ ಪೊಲೀಸರು ಫೆಬ್ರವರಿ ೪ರಂದು ಅಜ್ಞಾತ ವ್ಯಕ್ತಿಗಳ ವಿರುದ್ಧ, ದೇಶದ್ರೋಹ, ಸಮುದಾಯಗಳ ನಡುವೆ ದ್ವೇಷ ಪ್ರಚೋದನೆ ಹಾಗೂ ಅಪರಾಧದ ಕುತಂತ್ರದ ಪ್ರಕರಣವನ್ನು ದಾಖಲಿಸಿದರು. ಈ ಟೂಲ್‌ಕಿಟ್‌ನ ಮೂಲ ಹಾಗೂ ಹಂಚಿಕೆಗೆ ಸಂಬಂಧಪಟ್ಟಂತಹ ಮಾಹಿತಿಯನ್ನು ಒದಗಿಸುವಂತೆ ಗೂಗಲ್ ಹಾಗೂ ಇತರೆ ತಂತ್ರಜ್ಞಾನ ಸಂಸ್ಥೆಗಳನ್ನು ಪೊಲೀಸರು ಕೋರಿದರು. ಈ ತಪಾಸಣೆಯ ದಿಕ್ಕೇ ದಿಶಾಳ ಬಂಧನ ಎನ್ನುವುದು ಪೊಲೀಸರ ಆಂಬೋಣ.

ದಿಶಾಳ ವಿರುದ್ಧ ದೆಹಲಿ ಪೊಲೀಸರ ಆರೋಪವೇನು?

ನಿಕಿತಾ ಜಾಕೋಬ್ ಎಂಬ ಹೆಸರಿನ ಓರ್ವ ವಕೀಲೆ ಹಾಗೂ ಶಂತನು ಮಲ್ಲಿಕ್ ಎಂಬ ಹೆಸರಿನ ಓರ್ವ ಎಂಜಿನಿಯರ್ ಅವರ ಜೊತೆ ಸೇರಿ ದಿಶಾ ರವಿ ಅವರು ಈ ಟೂಲ್‌ಕಿಟ್ ಅನ್ನು ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಟೂಲ್‌ಕಿಟ್‌ನ ಮಾರ್ಗಸೂಚನೆಗಳ ಪ್ರಕಾರವಾಗಿಯೇ ಜನವರಿ ೨೬ರಂದು ದೆಹಲಿಯ ಕೆಂಪು ಕೋಟೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು. ಭಾರತದ ವಿರುದ್ಧ ದ್ವೇಷವನ್ನು ಸೃಷ್ಟಿಸುವಂತಹ ಅಂಶಗಳನ್ನು ಒಳಗೊಂಡಿದ್ದಂತಹ ಈ ಟೂಲ್‌ಕಿಟ್ ಅನ್ನು ಸಿದ್ಧಪಡಿಸಿ, ಅದನ್ನು ಹಂಚುವಲ್ಲಿ ಈ ಗುಂಪು ಪ್ರಮುಖ ಪಾತ್ರ ನಿರ್ವಹಿಸಿದೆ ಎನ್ನುವುದು ಪ್ರಮುಖ ಆರೋಪ. ಜೊತೆಗೆ, ಈ ಗುಂಪು ಖಲಿಸ್ತಾನ್ ಪರವಾಗಿರುವಂತಹ ‘ಪೊಯೆಟಿಕ್ ಜಸ್ಟೀಸ್ ಫೌಂಡೇಷನ್’ ಜೊತೆಗೂ ಕೆಲಸವೂ ಮಾಡಿದೆ ಎನ್ನಲಾಗಿದೆ. ಕೆನಡಾ ಮೂಲದ ಓರ್ವ ಮಹಿಳೆ ಇವರನ್ನು ‘ಪೊಯೆಟಿ ಜಸ್ಟೀಸ್ ಫೌಂಡೇಷನ್’ನೊAದಿಗೆ ಸಂಪರ್ಕ ಕಲ್ಪಿಸಿದ್ದಾರೆ, ಹಾಗೂ ಅವರ ಮೂಲಕ ‘ಗ್ಲೋಬಲ್ ಫಾರ್ಮರ್ ಸ್ಟೆçöÊಕ್’ ಹಾಗೂ ‘ಗ್ಲೋಬಲ್ ಡೇ ಆಫ್ ಆ್ಯಕ್ಷನ್, ೨೬ ಜನವರಿ’ ಎಂಬ ಶೀರ್ಷಿಕೆಗಳಿರುವ ಎರಡು ಟೂಲ್‌ಕಿಟ್‌ಗಳನ್ನು ಸೃಷ್ಟಿಸಲಾಗಿದೆ.

ಪೊಲೀಸರು ಈ ಕಾರ್ಯಕರ್ತರನ್ನು ಭಾರತವಿರೋಧಿ ಗುಂಪುಗಳೊಂದಿಗೆ ಏಕೆ ಸಂಬಂಧ ಕಲ್ಪಿಸುತ್ತಿದ್ದಾರೆ?

ಖಲಿಸ್ತಾನ್ ಪರವಾದ ಗುಂಪುಗಳು, ಭಾರತದಲ್ಲಿ ಗದ್ದಲವನ್ನು ಸೃಷ್ಟಿಸಲು ರೈತರ ಪ್ರತಿಭಟನೆಯನ್ನು ಒಂದು ಅಸ್ತçವನ್ನಾಗಿ ಹಾಗೂ ಅವರ ದೇಶದ್ರೋಹಿ ಕಾರ್ಯಯೋಜನೆಗಳ ವಿರುದ್ಧ ಈ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಪೊಲೀಸರ ಆರೋಪ. ಅಲ್ಲದೆ, ಈ ಕಾರ್ಯಕರ್ತರು ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡಿರುವ ಒಂದು ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಮತ್ತೊಂದು ಆರೋಪ. ಈ ಟೂಲ್‌ ಕಿಟ್‌ನಲ್ಲಿ ಪೀಟರ್ ಫ್ರೆಡ್ರಿಕ್ ಎಂಬ ಒಂದು ಹೆಸರು ಪ್ರಸ್ತಾಪವಾಗಿದ್ದು, ಆತ ಭಜನ್ ಸಿಂಗ್ ಭಿಂದರ್ ಅಲಿಯಾಸ್ ಇಕ್ಬಾಲ್ ಚೌಧರಿ ಎಂಬ ಹೆಸರಿನ ಐಎಸ್‌ಐನೊಂದಿಗೆ ಲಿಂಕ್ ಇರುವ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಪೊಲೀಸರ ಪ್ರಕಾರ ಕಾರ್ಯಕರ್ತರೂ ಸಹ ಇಂತಹ ಅಪಾಯಕಾರಿ ಲಿಂಕ್‌ಗಳನ್ನು ಹೊಂದಿರುವರೇ ಎಂದು ತಪಾಸಣೆ ಮಾಡಬೇಕಾಗಿದೆ.

 

ಡೆಕ್ಕನ್ ಹೆರಾಲ್ಡ್

Key words: Tool kit -word – everyone’s- mouth-what is the Tool Kit?-  detail.