ಟೋಕಿಯೋ ಒಲಂಪಿಕ್-2020:  ಸೆಮಿ ಫೈನಲ್ ಗೆ ಭಾರತ ಮಹಿಳಾ ಹಾಕಿ ತಂಡ.

kannada t-shirts

ಟೋಕಿಯೋ,ಆಗಸ್ಟ್,2,2021(www.justkannada.in):  ಜಪಾನ್ ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದ ಭಾರತ ಮಹಿಳಾ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಕ್ವಾರ್ಟರ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 1-0 ಗೋಲುಗಳಿಂದ ಗೆಲುವು ಸಾಧಿಸಿದ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ  ಒಲಿಂಪಿಕ್ಸ್ ಇತಿಹಾಸದಲ್ಲಿ 41 ವರ್ಷಗಳ ಬಳಿಕ ಎಂಟರಘಟ್ಟಕ್ಕೇರಿದೆ.

ಎ ಗುಂಪಿನಲ್ಲಿ ಹ್ಯಾಟ್ರಿಕ್ ಸೋಲಿನ ನಡುವೆಯೂ ಕಡೇ ಎರಡು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿದ ಭಾರತ ಮಹಿಳಾ ತಂಡ, 6 ಪಾಯಿಂಟ್ಸ್‌ಗಳೊಂದಿಗೆ 4ನೇ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಕ್ವಾರ್ಟರ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ಬಗ್ಗು ಬಡಿದು ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಸೆಮಿ ಫೈನಲ್ ನಲ್ಲಿ ಅರ್ಜಂಟೈನಾ ವಿರುದ್ಧ ಭಾರತ ಮಹಿಳಾ ತಂಡ ಸೆಣೆಸಾಡಲಿದೆ.

ENGLISH SUMMARY…

Tokyo Olympics-2020: India’s Women’s Hockey team enters semi-finals
Tokyo, August 2, 2021 (www.justkannada.in): India’s Women’s Hockey team has entered the semi-finals in the 2020 Olympic games being held in Tokyo, Japan, by beating rivals Australia.
The women’s team registered victory by scoring 1-0 goal against Australia in the quarter final. Thus the Indian team has entered the semi-finals after 41 years.
The Indian Women’s Hockey team which faced a hatrick failure in Group ‘A’, exhibited a good performance in the last two games, and registered it s place in the quarter finals with 6 points. Now it has entered the semi-finals by beating the strong Australian team.
Keywords: Indian Women’s Hockey team/ semi-finals/ Tokyo Olympics

Key words: Tokyo Olympic -2020-India -women’s- hockey team – semi-finals

website developers in mysore