ಇಂದು ‘ಜಂಬೋ’ ಕುಂಬ್ಳೆ ಐತಿಹಾಸಿಕ ದಾಖಲೆ ಬರೆದ ದಿನ

ಬೆಂಗಳೂರು, ಫೆಬ್ರವರಿ 07, 2020 (www.justkannada.in): ಟೆಸ್ಟ್ ಕ್ರಿಕೆಟ್ ನ ಒಂದೇ ಇನಿಂಗ್ಸ್ ನಲ್ಲಿ ಎಲ್ಲಾ 10 ವಿಕೆಟ್ ಗಳನ್ನೂ ಕಬಳಿಸಿದ ಅನಿಲ್ ಕುಂಬ್ಳೆ ಸಾಧನೆಯನ್ನು ಕ್ರಿಕೆಟ್ ಇತಿಹಾಸ ಎಂದಿಗೂ ಮರೆಯದು.

ಜಂಬೋ ಈ ದಾಖಲೆ ಮಾಡಿ ಇಂದಿಗೆ 21 ವರ್ಷ. ಇದೇ ದಿನ ಅಂದರೆ ಫೆಬ್ರವರಿ 7 ರಂದು 1999 ರಲ್ಲಿ ಕುಂಬ್ಳೆ ಪಾಕಿಸ್ತಾನದ ವಿರುದ್ಧ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಈ ಸಾಧನೆ ಮಾಡಿದ್ದರು.

ಆವತ್ತು ಒಟ್ಟು 26.3 ಓವರ್ ಬೌಲಿಂಗ್ ಮಾಡಿದ್ದ ಕುಂಬ್ಳೆ 74 ರನ್ ನೀಡಿ ಎಲ್ಲಾ 10 ವಿಕೆಟ್ ಕಬಳಿಸಿದ್ದರು. ಅನಿಲ್ ಕುಂಬ್ಳೆಯ ಈ ಸಾಧನೆಯಿಂದಾಗಿ ಅಂದು ಟೀಂ ಇಂಡಿಯಾ 212 ರನ್ ಗಳ ಭಾರೀ ಅಂತರದಿಂದ ಪಂದ್ಯ ಗೆದ್ದುಕೊಂಡಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಕೂಡಾ ಕುಂಬ್ಳೆ ಈ ಐತಿಹಾಸಿಕ ದಿನವನ್ನು ಸ್ಮರಿಸಿ ಟ್ವೀಟ್ ಮಾಡಿದೆ.