ಮೈಸೂರಿನಲ್ಲಿಂದು 30ಕ್ಕೂ ಹೆಚ್ಚು ಕೊರೋನಾ ಪಾಸಿಟೀವ್ ಸಾಧ್ಯತೆ…

Promotion

ಮೈಸೂರು,ಜು,7,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲಾ ಜಿಲ್ಲಾಡಳಿತಕ್ಕೆ ತಲೆ ನೋವು ಉಂಟಾಗಿದೆ.jk-logo-justkannada-logo

ನಿನ್ನೆ ಜಿಲ್ಲೆಯಲ್ಲಿ 45 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಇದೀಗ ಇಂದು 30ಕ್ಕೂ ಹೆಚ್ಚು ಕೊರೋನಾ ಕೇಸ್ ಗಳು ಬರುವ ಸಾಧ್ಯತೆ ಇದೆ. ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲ ಜಿಲ್ಲಾಡಳಿತಕ್ಕೆ ತಲೆನೋವು ಶುರುವಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.today-30-corona-positives-mysore

ಇನ್ನು ಕೋವಿಡ್ ಆಸ್ಪತ್ರೆ ಬೆಡ್ ಗಳು ಭರ್ತಿಯಾಗಿರುವ ಹಿನ್ನೆಲೆ  ಹೆಚ್ಚುವರಿ ರೋಗಿಗಳ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಮಂಡಕಳ್ಳಿಯಲ್ಲಿರುವ ಕೆಎಸ್ಒಯು ವಿಸ್ತರಣಾ ಕಟ್ಟಡಕ್ಕೆ ರೋಗಿಗಳನ್ನ  ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಈಗಾಗಲೇ ಕೋವಿಡ್ ಚಿಕಿತ್ಸೆಗೆ ಮೈಸೂರು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.

Key words: today- 30- Corona -Positives – Mysore