ಪಠ್ಯಪುಸ್ತಕದಿಂದ ಟಿಪ್ಪು ಇತಿಹಾಸ ಕೈಬಿಡದಂತೆ ಒತ್ತಾಯ: ನಿಮಗೆ ತಾಕತ್ ಇದ್ರೆ ಎಲ್ಲಾ ಜಯಂತಿ ರದ್ದು ಮಾಡಿ -ಸಿಎಂ ಬಿಎಸ್ ವೈಗೆ ವಾಟಾಳ್ ನಾಗರಾಜ್ ಸವಾಲು…

ಮೈಸೂರು,ನ,11,2019(www.justkananda.in): ಟಿಪ್ಪು ಸುಲ್ತಾನ್ ವಿಷಯವನ್ನ ಪಠ್ಯ ಪುಸ್ತಕದಿಂದ ಕೈಬಿಡಬಾರದು ಎಂದು ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್  ನೇತೃತ್ವದಲ್ಲಿ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.

ಮೈಸೂರು ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ  ವಾಟಾಳ್ ನಾಗರಾಜ್, ಟಿಪ್ಪು ಸುಲ್ತಾನ್ ಅಪ್ರತಿನ ಸ್ವಾತಂತ್ರ್ಯ ಹೋರಾಟಗಾರ. ಅಂತವರ ವಿಚಾರವನ್ನು ಪಠ್ಯ ಪುಸ್ತಕದಿಂದ ಕೈಬಿಡಿವುದು ಖಂಡನೀಯ. ಯಡಿಯೂರಪ್ಪ ನಿಮಗೆ ತಾಕತ್ ಇದ್ರೆ ಎಲ್ಲಾ ಜಯಂತಿ ರದ್ದು ಮಾಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಸವಾಲು ಹಾಕಿದರು.

ಯಾವುದೇ ಪಕ್ಷದ ಮುಖ್ಯಮಂತ್ರಿ ಆದ್ರು ರಾಜ್ಯದ ಹಿತ ಕಾಯಬೇಕು. ಯಡಿಯೂರಪ್ಪ ಅಧಿಕಾರಕ್ಕೆ‌ ಬಂದ‌ ಕೂಡಲೇ ಟಿಪ್ಪು ಜಯಂತಿ ರದ್ದು ಮಾಡಿದ್ರು. ಚರಿತ್ರೆಗಳನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಚರಿತ್ರೆಗಳಿಗೆ ಅದರದ್ದೇ ಆದ ಮಹತ್ವ ಇದೆ. ಟಿಪ್ಪು ದೇಶಕ್ಕಾಗಿ ತಮ್ಮ ಮಕ್ಕಳನ್ನೆ ಒತ್ತೆ ಇಟ್ಟಿದ್ರು. ಅಂತವರ ವಿಷಯವನ್ನ ಪಠ್ಯ ಪುಸ್ತಕದಲ್ಲಿ ತೆಗೆಯುಲು ಹೊರಟಿದ್ದಾರೆ‌. ಇದು ಸರಿಯಾದ ಬೆಳವಣಿಗೆಯಲ್ಲ. ಯಡಿಯೂರಪ್ಪ ನಿಮಗೆ ಏಚ್ಚರಿಕೆ ಕೊಡುತ್ತಿದ್ದೇನೆ. ಒಂದು ವೇಳೆ ಟಿಪ್ಪು ವಿಷಯವನ್ನ ಪಠ್ಯೆದಿಂದ ತೆಗೆದರೆ ಎಲ್ಲರು ದಂಗೆ ಏಳುತ್ತಾರೆ. ಕೆಲವು ಶಾಸಕರ ಮಾತು ಕೇಳಿ ನೀವು ಈ ರೀತಿಯ ತೀರ್ಮಾನ ಮಾಡಬೇಡಿನೀವು ಸ್ವಂತ ನಿರ್ಧಾರ ತೆಗೆದುಕೊಳ್ಳಿ ಎಂದು ವಾಟಾಳ್ ನಾಗರಾಜ್ ಸಿಎಂ ಬಿಎಸ್ ವೈಗೆ ಸಲಹೆ ನೀಡಿದರು.

ಇದೇ ವೇಳೆ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್,  ಪ್ರಧಾನಿ ಮೋದಿಯವರಿಗೆ ಕರ್ನಾಟಕ ಕಂಡರೆ ಆಗಲ್ಲ. ಕರ್ನಾಟಕ ಕೇವಲ ಅವರ ಭಾಷಣಕ್ಕೆ  ಮಾತ್ರ ಸೀಮಿತವಾಗಿದೆ. ಉತ್ತರ ಕರ್ನಾಟಕದ ಸಂತ್ರಸ್ತರನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಡೆಗಣಿಸುತ್ತಿದೆ. ಕೂಡಲೆ ಕೇಂದ್ರ 50 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ  ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪಚುಣಾವಣೆಯಲ್ಲಿ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್,  ಬೆಂಗಳೂರ ಮಹಾಲಕ್ಷ್ಮಿ ಕ್ಷೇತ್ರದದಿಂದ ಸ್ಪರ್ಧೆಗೆ ಆಹ್ವಾನ ಬಂದಿದೆ. ರಾಜ್ಯದ ಎಲ್ಲಾ ಕನ್ನಡ ಪರ ಸಂಘಟನೆಗಳು ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿವೆ. ಎಲ್ಲರೂ ಒಟ್ಟಾಗಿ ಸಹಕರಿಸಿದರೆ, ಕೊನೆಯ ದಿನ ನಾಮಪತ್ರ ಸಲ್ಲಿಸುತ್ತೇನೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Key words: Tippu sultan- History- Kannada fighter-vatal Nagaraj-protest-myosre