ಟಿಪ್ಪು ಒಬ್ಬ ದೇಶ ಭಕ್ತ,ಹೋರಾಟಗಾರ: ಜಯಂತಿ ರದ್ದು ಮಾಡಿರೋದು ಸರಿಯಲ್ಲ-ಸರ್ಕಾರದ ವಿರುದ್ದ ಸಾಹಿತಿ ಕೆ.ಎಸ್ ಭಗವಾನ್ ಕಿಡಿ….

ಮೈಸೂರು,ಆ,3,2019(www.justkanna.in): ಟಿಪ್ಪು ಒಬ್ಬ ದೇಶ ಭಕ್ತ,ಹೋರಾಟಗಾರ: ಅವನ ಜಯಂತಿ ರದ್ದು ಮಾಡಿರೋದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಸಾಹಿತಿ ಕೆ.ಎಸ್ ಭಗವಾನ್ ಕಿಡಿಕಾರಿದರು.

ಟಿಪ್ಪು ಜಯಂತಿ ರದ್ದು ವಿರೋಧಿಸಿ ಮೈಸೂರಿನ ಜಿಲ್ಲಾಧಿಕಾರಿಗಳ ಬಳಿ ಪ್ರತಿಭಟನೆ ನಡೆಸಿ ಮಾತನಾಡಿದ ಸಾಹಿತಿ ಕೆ.ಎಸ್ ಭಗವಾನ್ , ರದ್ದು ಮಾಡೋದಾದ್ರೆ ಎಲ್ಲಾ ಜಯಂತಿಗಳನ್ನ ರದ್ದು ಮಾಡಿ. ಹಿಂದೂ ಮತ ಅಂದ್ರೆ ಅದು ಬ್ರಾಹ್ಮಣರ ಮತ ಅಷ್ಟೇ. ಟಿಪ್ಪು ಒಬ್ಬ ದೇಶ ಭಕ್ತ…ಹೋರಾಟಗಾರ..ಅವನ ಜಯಂತಿ ರದ್ದು ಮಾಡಿರೋದು ಸರಿಯಲ್ಲ ಎಂದರು.

ಟಿಪ್ಪು ಜಯಂತಿಯನ್ನ ಅವ್ರ ಜನಾಂಗ ಮಾಡಲಿ, ಸರ್ಕಾರದ ವತಿಯಿಂದ ಮಾಡೋದು ಬೇಡ, ಇಲ್ಲವಾದಲ್ಲಿ ಕೋಮುಗಲಭೆ ಸೃಷ್ಟಿಯಾಗುತ್ತೆ ಎಂಬ  ಪೇಜಾವರ ಶ್ರೀ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಭಗವಾನ್, ಶಂಕರಾಚಾರ್ಯರು ವೇದ, ಶಾಸ್ತ್ರಗಳನ್ನ ಶೂದ್ರರು ಓದಿದ್ರೆ ನಾಲಿಗೆ ಕತ್ತರಿಸಿ ಅಂತಾ ಬರೆದಿದ್ದಾರೆ. ಅವ್ರ ಜಂಯತಿಯನ್ನ ನೀವು ವಿರೋಧಿಸಲ್ಲ. ಟಿಪ್ಪು ಜಯಂತಿಯನ್ನ ಯಾಕೆ ವಿರೋಧ ಮಾಡ್ತಿರಾ…? ಟಿಪ್ಪು ಅವನ ಆಡಳಿತದಲ್ಲಿ ಯಾರಿಗಾದ್ರೂ ನಾಲಿಗೆ ಕತ್ತರಿಸಿ ಅಂತಾ ಹೇಳಿದ್ದಾನಾ…? ಆವನ ಆಡಳಿತಾವಧಿಯಲ್ಲಿ ಬಹಳಷ್ಟು ಜನ ಬ್ರಾಹ್ಮಣರಿದ್ರು…ಯಾರಿಗಾದ್ರೂ ಒಬ್ಬರಿಗೆ ತಲೆ ತುಂಡರಿಸಿ ಅಂತಾ ಹೇಳಿದ್ದಾನಾ…? ಟಿಪ್ಪು ರಾಜ್ಯದ ಅಭಿವೃದ್ಧಿಗಾಗಿ ಒಳ್ಳೆ ಕೆಲಸ ಮಾಡಿದ್ದಾನೆ. ಪೇಜಾವರ ಶ್ರೀಗಳು ಅದನ್ನ ಅರ್ಥೈಸಿಕೊಳ್ಳಬೇಕು ಎಂದು ಟಾಂಗ್ ಕೊಟ್ಟರು.

ನಾಲ್ಕನೇ ಅಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಮಡಿಯದಿದ್ದರೆ, ಕಾವೇರಿ ಸಮಸ್ಯೆಯೇ ಇರುತ್ತಿರಲಿಲ್ಲ. ಯಾಕಂದ್ರೆ ಅವನ ಸಾಮ್ರಾಜ್ಯದ ಅಧಿನದಲ್ಲಿ ಮದ್ರಾಸ್ ಇತ್ತು. ಆದ್ರೆ, ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಮೈಸೂರು ಪ್ರಾಂತ್ಯ ಕೂಡ ಮದ್ರಾಸ್ ಸರ್ಕಾರಕ್ಕೆ ಸೇರಿದ್ರಿಂದ ಈಗ ಸಾಕಷ್ಟು ನೀರಿನ ವಿವಾದ ಆಗಿದೆ. ಕಾವೇರಿ ನೀರಿನ ವಿಚಾರ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. ಈ ಬಗ್ಗೆ ರಾಜ್ಯದಲ್ಲಿನ ಹೋರಾಟ ಮಾಡಲು ಯಾವ ಶೂರರು, ವೀರರು ಇಲ್ಲವಲ್ಲ ಅನ್ನೋದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

Key words: Tippu jayanthi- cancel-not right -KS Bhagavan-mysore