ಟಿಪ್ಪು ಸೇರಿ ಹಲವು ವಿಷಯ ಪಠ್ಯದಿಂದ ಕೈಬಿಟ್ಟಿರುವ ನಿರ್ಧಾರದಿಂದ ಹಿಂದೆ ಸರಿಯದಿದ್ರೆ ಉಗ್ರ ಹೋರಾಟ- ಸರ್ಕಾರಕ್ಕೆ ಮೈಸೂರಿನಲ್ಲಿ ಎಚ್ಚರಿಕೆ…

kannada t-shirts

ಮೈಸೂರು,ಜು,31,2020(www.justkannada.in): ಟಿಪ್ಪು ಸಲ್ತಾನ್ ಸೇರಿದಂತೆ ಹಲವು ವಿಷಯವನ್ನು ಪಠ್ಯದಿಂದ ಕೈಬಿಟ್ಟಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.jk-logo-justkannada-logo

ನಗರದ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಇಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿ  ಟಿಪ್ಪು ಸೇರಿ ಹಲವು ವಿಷಯ ಪಠ್ಯದಿಂದ ಕೈಬಿಟ್ಟಿರುವ ನಿರ್ಧಾರದಿಂದ ಹಿಂದೆ ಸರಿಯದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಭಟನಾಕಾರರು,   ಸಂಗೊಳ್ಳಿ ರಾಯಣ್ಣ , ರಾಣಿ ಅಬ್ಬಕ್ಕ , ಟಿಪ್ಪು ಸುಲ್ತಾನ್ , ಏಸುಕ್ರಿಸ್ತ , ಪ್ರವಾದಿ , ಸಂವಿಧಾನ ಮೊದಲಾದ ವಿಷಯಕ್ಕೆ ಸಂಬಂಧಿಸಿದ ಪಠ್ಯವನ್ನು ಪಠ್ಯಕ್ರಮದಿಂದ ಕೈಬಿಟ್ಟಿರುವುದು ದುರ್ದೈವದ ಸಂಗತಿ .

ದೇಶಪ್ರೇಮಿ ಟಿಪ್ಪು ಸುಲ್ತಾನ್ ಕುರಿತು ಇರುವ ಇತಿಹಾಸವನ್ನು ಪಠ್ಯದಿಂದ ತೆಗೆದು ಹಾಕುವ ನಿರ್ಧಾರಕ್ಕೆ ಸರ್ಕಾರ ಹೊರಟಿರುವುದು ಖಂಡನೀಯ . ಸ್ವಾತಂತ್ರ್ಯಕ್ಕಾಗಿ ಟಿಪ್ಪು ಸುಲ್ತಾನ್ ಪಟ್ಟ ಕಷ್ಟದ ಹೋರಾಟವನ್ನು ನಾಶಪಡಿಸುತ್ತಿರುವುದು ದುರ್ದೈವದ ಸಂಗತಿ.tippu-history-drop-content-protest-mysore

ಸಂಗೊಳ್ಳಿ ರಾಯಣ್ಣ , ರಾಣಿ ಅಬ್ಬಕ್ಕ , ಟಿಪ್ಪು ಸುಲ್ತಾನ್ ಇವರೆಲ್ಲ ದೇಶಭಕ್ತರು . ಅವರಿಗೆ ಗೌರವ ನೀಡುವುದು ಯುವಜನತೆಯ ಕರ್ತವ್ಯ . ಟಿಪ್ಪು ವಿಚಾರ ಮಾತ್ರವಲ್ಲದೆ ಸಂವಿಧಾನ ಜಾತ್ಯಾತೀತತೆ , ಪ್ರಜಾಪ್ರಭುತ್ವ ಮುಂತಾದ ವಿಷಯಗಳನ್ನು ಒಳಗೊಂಡ ಪಠ್ಯವನ್ನು ಕಡಿತ ಮಾಡುತ್ತಿದೆ . ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು , ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Key words: Tippu history- drop -content –protest- mysore

website developers in mysore