ಇದು ಮೂರು ಪಕ್ಷಗಳ ಸರ್ಕಾರ: ನನ್ನ ಇಲಾಖೆಯಲ್ಲಿ ಬೇರೊಬ್ಬರ ಹಸ್ತಕ್ಷೇಪ ಸಹಿಸಲ್ಲ-ಸಚಿವ ಸಿ.ಪಿಯೋಗೇಶ್ವರ್ ಅಸಮಾಧಾನ.

kannada t-shirts

ಬೆಂಗಳೂರು,ಮೇ,27,2021(www.justkannada.in): ನನ್ನ ಇಲಾಖೆಯಲ್ಲಿ ಬೇರೊಬ್ಬರು ತಲೆ ಹಾಕಿದರೇ ಸಹಿಸುವುದಿಲ್ಲ. ನನ್ನ ಸಚಿವಗಿರಿಯನ್ನ ನನ್ನ ಮಗ ಚಲಾಯಿಸಿದರೇ ಒಪ್ಪಲ್ಲ.  ನಾನು ಸೂಕ್ಷ್ಮವಾಗಿ ಹೇಳುತ್ತಿದ್ದೇನೆ. ಅರ್ಥಮಾಡಿಕೊಳ್ಳಿ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.jk

ರಾಜ್ಯದಲ್ಲಿ ಸಿಎಂ ಬದಲಾವಣೆಗೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಬಗ್ಗೆ ವರದಿಯಾಗುತ್ತಿದ್ದು ಈ ವಿಚಾರದಲ್ಲಿ ತಮ್ಮ ಹೆಸರು ತಳುಕು ಹಾಕಿಕೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಇಂದು ಸಚಿವ ಸಿ.ಪಿ ಯೋಗೇಶ್ವರ್ ಪ್ರತಿಕ್ರಿಯಿಸಿ ತಮ್ಮ ಇಲಾಖೆಯಲ್ಲಿ ಬೇರೊಬ್ಬರ ಹಸ್ತಕ್ಷೇಪದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಸಿಎಂ ಬದಲಾವಣೆ ನನ್ನ ಉದ್ದೇಶ ಅಲ್ಲ. ನನ್ನ ಸಚಿವಗಿರಿಯನ್ನು ನನ್ನ ಮಗ ಚಲಾಯಿಸಿದರೇ ಸಹಿಸಲ್ಲ. ನನ್ನ ಅಧಿಕಾರವನ್ನ ನನ್ನ ಮಗ ಚಲಾಯಿಸಿದರೇ ಆಗೋದಿಲ್ಲ. ನನ್ನ ಇಲಾಖೆಯಲ್ಲಿ ಬೇರೊಬ್ಬರು ತಲೆಹಾಕಿದರೇ ಅದನ್ನ ಒಪ್ಪುವುದಿಲ್ಲ ಎಂದರು.

ಹಾಗೆಯೇ ಈಗಿರೋದು ಬಿಜೆಪಿ ಸರ್ಕಾರವಲ್ಲ. ಮೂರು ಪಕ್ಷಗಳ ಸರ್ಕಾರ.  ಮೂರು ಗುಂಪಿನ ಸರ್ಕಾರವಾಗಿದೆ. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ನಾನು ಸಚಿವನಿದ್ದೇನೆ ಕೆಲ ವಿಚಾರಗಳನ್ನ ಬಹಿರಂಗವಾಗಿ ಹೇಳಲು ಆಗಲ್ಲ ಎಂದು ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದರು.

Key words: three-party- government-interference – someone – my department-Minister- C.P  yogeshwar

website developers in mysore