ಮಾದಕ ವಸ್ತು ಮಾರಾಟ: ಬೆಂಗಳೂರಲ್ಲಿ ಮತ್ತೆ ಮೂವರು ಪೊಲೀಸ ಬಲೆಗೆ

kannada t-shirts

ಬೆಂಗಳೂರು, ಸೆಪ್ಟೆಂಬರ್ 01, 2020 (www.justkannada.in): ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮತ್ತೆ ಮೂವರನ್ನು ಬಂಧಿಸಲಾಗಿದೆ.

ಮಹಮ್ಮದ್ ಅಲಗೀರ್, ಮಹಮ್ಮದ್ ರಿಪೂನ್ ಹಾಗೂ ಮೊಹರ್ ಅಲಿ ಬಂಧಿತರು. ಈ ಮೂವರು ಪಶ್ಚಿಮ ಬಂಗಾಳ ಮೂಲದವರು. ಬೇಗೂರು ಪೋಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 4.40 ಲಕ್ಷ ನಗದು, 11 ಕೆಜಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಪಶ್ಚಿಮ ಬಂಗಾಳದಿಂದ ಮಾದಕವಸ್ತುಗಳನ್ನು ಬೆಂಗಳೂರಿಗೆ ತಂದು ಮಾರಾಟ ನಡೆಸಿದ್ದರು.

website developers in mysore