ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವಬೆದರಿಕೆ ಹಿನ್ನೆಲೆ ಭದ್ರತೆಗೆ ಮನವಿ ಮಾಡಿದ್ದೇನೆ- ಮಾಜಿ ಸಚಿವ ವರ್ತೂರು ಪ್ರಕಾಶ್….

ಬೆಂಗಳೂರು,ಡಿಸೆಂಬರ್ 2,2020(www.justkannada.in): ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಕಿಡ್ನಾಪ್ ಮಾಡಿ, 30 ಕೋಟಿ ರೂ. ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಮಧ್ಯೆ ಮಾಜಿ ಸಚಿವ ವರ್ತೂರು ಪ್ರಕಾಶ್  ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಕಿಡ್ನಾಪ್ ಕುರಿತು ವಿವರ ನೀಡಿದ್ದಾರೆ.logo-justkannada-mysore

ಗೃಹಸಚಿವರ ಭೇಟಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ವರ್ತೂರು ಪ್ರಕಾಶ್, ಗೃಹ ಸಚಿವರಿಗೆ ಎಲ್ಲಾ ವಿವರ ನೀಡಿದ್ದೇನೆ. ಆದಷ್ಟು ಬೇಗ ಆರೋಪಿಗಳನ್ನ ಬಂಧಿಸುವಂತೆ ಮನವಿ ಮಾಡಿದ್ದೇನೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಈ ಹಿನ್ನೆಲೆ  ಭದ್ರತೆಗಾಗಿ ಗೃಹ ಸಚಿವರಿಗೆ ಮನವಿ ಮಾಡಿದ್ಧೇನೆ. ಭದ್ರತೆ ನೀಡುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ. ಇನ್ನು ಶೀಘ್ರವೇ ಆರೋಪಿಗಳ ಬಂಧಿಸುವ ವಿಶ್ವಾಸವಿದೆ ಎಂದರು.

ಕೋಲಾರದ ಬೆಗ್ಲಿಹೊಸಹಳ್ಳಿ ಗ್ರಾಮದ ಫಾರಂ ಹೌಸ್‌ನಿಂದ ನ.25ರ ಸಂಜೆ 7ಕ್ಕೆ ನನ್ನ ಕಾರು ಚಾಲಕ ಸುನೀಲ್ ಜತೆ ಫಾರ್ಚೂನರ್ ಕಾರಿನಲ್ಲಿ ಕೋಲಾರ ನಗರಕ್ಕೆ ತೆರಳುತ್ತಿದ್ದೆ. ಈ ವೇಳೆ ನನ್ನನ್ನ 8 ಜನರ ತಂಡ ಕಿಡ್ನಾಪ್ ಮಾಡಿದ್ರು. ಕಾರನ್ನ ಅಡಗಟ್ಟಿ ಚಾಕು ತೋರಿಸಿ ಮಾಡಿದ್ದರು.  ಅಪಹರಣದ ನಂತರ ಮೂರು ದಿನ ನನ್ನನ್ನು ಕೂಡಿ ಹಾಕಲಾಗಿತ್ತು. ಹಲ್ಲೆ ಮಾಡೋ ಸಂದರ್ಭದಲ್ಲಿ ಹಣ ಕೊಡಲಿಲ್ಲ ಅಂದ್ರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಲಾಗಿತ್ತು. ನನ್ನ ಡ್ರೈವರ್​  ಮೇಲೂ ಹಲ್ಲೆ ಮಾಡಿದ್ದಾರೆ ಎಂದು ವರ್ತೂರು ಪ್ರಕಾಶ್ ತಿಳಿಸಿದರು.

Key words:  threatening -appealed – security- home minister-  Former minister- Vartur Prakash-kidnap