ಟಿಹೆಚ್ ಒ ನಾಗೇಂದ್ರ ಆತ್ಮಹತ್ಯೆ ಕೇಸ್: ಸಿಇಓ ಪ್ರಶಾಂತ್ ಮಿಶ್ರಾ ಪರ ನಿಂತ ಐಎಎಸ್ ಆಫಿಸರ್ಸ್ ಅಸೋಸಿಯೇಷನ್….

ಮೈಸೂರು,ಆ,25,2020(www.justkannada.in):  ನಂಜನಗೂಡು ತಾಲ್ಲೂಕು ವೈದ್ಯಾಧಿಕಾರಿ ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೈಸೂರು ಜಿ.ಪಂ ಸಿಇಒ ಪ್ರಶಾಂತ್ ಮಿಶ್ರಾ ಅವರನ್ನ ವರ್ಗಾವಣೆ ಮಾಡಲಾಗಿದೆ. ಈ ಮಧ್ಯೆ ಇದೀಗ ಐಎಎಸ್ ಆಫಿಸರ್ಸ್ ಅಸೋಸಿಯೇಷನ್ ಸಿಇಒ ಪ್ರಶಾಂತ್ ಮಿಶ್ರಾ ಪರ ನಿಂತಿದೆ.

ಹೌದು ನಾಗೇಂದ್ರ ಅವರ ಆತ್ಮಹತ್ಯೆ ದುರದೃಷ್ಟಕರ ಅದಕ್ಕೆ ನಮ್ಮ ಸಂತಾಪವಿದೆ.  ಅದರೆ ಆತ್ಮಹತ್ಯೆಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಅನ್ಯಾಯ. ವೈದ್ಯರ ಆತ್ಮಹತ್ಯೆಗೆ ಜಿ.ಪಂ ಸಿಇಓ ಪ್ರೇರೇಪಿಸಿದ ಅಂಶ ಸಾಭೀತಾಗಿಲ್ಲ. ಆದರೂ ಮೈಸೂರಿನ ಜಿ.ಪಂ ಸಿಇಓ ವಿರುದ್ಧ ಎಫ್‌ಐಆರ್ ದಾಖಲಿಸಿರುವುದುವ ಅಧಿಕಾರಿಗಳ ಸ್ಥೈರ್ಯವನ್ನು ತಗ್ಗಿಸಿದೆ ಎಂದು ಐಎಎಸ್ ಆಫಿಸರ್ಸ್ ಅಸೋಸಿಯೇಷನ್ ಹೇಳಿದೆ.

ಹಾಗೆಯೇ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ ಅಧಿಕಾರಿಯನ್ನು ದೂಷಿಸುವುದು ಸರಿಯಾದ ವಿಧಾನವಲ್ಲ.  ಕೋವಿಡ್ -19 ಸಂದರ್ಭದಲ್ಲಿ ಐಎಎಸ್ ಅಧಿಕಾರಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಕೋವಿಡ್ ಕರ್ತವ್ಯದಲ್ಲಿರುವ 24/7 ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇಂತಹ ಘಟನೆ ಆಡಳಿತಾತ್ಮಕ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಹದಗೆಡಿಸುತ್ತವೆ. ಕ್ಷೇತ್ರ ಮಟ್ಟದಲ್ಲಿ ಎಲ್ಲ ಅಧಿಕಾರಿಗಳು ಹಾಕುವ ಶ್ರಮಕ್ಕೆ ರಾಜ್ಯ ಸರ್ಕಾರ ಬೆಂಬಲ ನೀಡಬೇಕು. ಸರ್ಕಾರ ಅಧಿಕಾರಿಗಳಿಗೆ ಬೆಂಬಲವಾಗಿ ನಿಲ್ಲಬೇಕೆಂದು ಪತ್ರದ ಮೂಲಕ ಐಎಎಸ್ ಆಫಿಸರ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಮಾಡಿದೆ.

Key words:THO -Nagendra -Suicide Case-Prashant Mishra- CEO- IAS Officers Association.