ಅಕ್ರಮವಾಗಿ ಸಂಗ್ರಹಿಸಿದ್ದ ಬಿಜೆಪಿ ಮುಖಂಡರೊಬ್ಬರ ಭಾವಚಿತ್ರವಿರುವ ಬರೋಬ್ಬರಿ 30 ಸಾವಿರ ಸೀರೆಗಳು ವಶಕ್ಕೆ…

ಮೈಸೂರು,ನ,16,2019(www.justkannada.in): ಚುನಾವಣೆಯಲ್ಲಿ ಹಂಚಲು ಅಕ್ರಮವಾಗಿ ಸಂಗ್ರಹಿದ್ದ ಬರೋಬ್ಬರಿ 30 ಸಾವಿರ ಸೀರೆಗಳನ್ನ ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿದೆ.

ಉಪಚುನಾವಣೆಯಲ್ಲಿ ಹಂಚುವ ಸಲುವಾಗಿ ಮೈಸೂರಿನ ವಿಜಯನಗರ ಬಡಾವಣೆಯ ಮನೆಯಲ್ಲಿ ಸೀರೆಗಳನ್ನ  ಸಂಗ್ರಹಿಸಿಡಲಾಗಿತ್ತು. ಪ್ರತಿ ಸೀರೆಯ ಜೊತೆ ಸಿ.ಪಿ ಯೋಗೇಶ್ವರ್‌ಗೆ ಮತ ನೀಡಿ ಅನ್ನೋ ಕರಪತ್ರವಿದೆ. ಹುಣಸೂರಿನಿಂದ ಯೋಗೇಶ್ವರ್ ಸ್ಪರ್ಧೆ ಮಾಡ್ತಾರೆ ಎನ್ನಲಾಗುತ್ತಿತ್ತು. ಈ ಮೊದಲೇ ಮೈಸೂರಿನಲ್ಲಿ  ಯೋಗೇಶ್ವರ್ ಸಭೆ ನಡೆಸಿದ್ದರು.

ಮೈಸೂರಿನಲ್ಲಿ ಸಿಪಿ ಯೋಗೇಶ್ವರ್ ರಹಸ್ಯ ಸಭೆ ಮಾಡಿ ಸ್ಥಳೀಯ ಮುಖಂಡರ ಜೊತೆ ಮಾತುಕತೆ ನಡೆಸಿದ್ದರು. ಇದೀಗ ಚುನಾವಣೆಗೆ ಹಂಚಲು ಸಂಗ್ರಹಿಸಿದ್ದ ಸೀರೆ ಚೀಲಗಳ ಮೇಲೆ ಯೋಗೇಶ್ವರ್ ಭಾವಚಿತ್ರವಿದ್ದು ಚೀಲಗಳಲ್ಲಿ ತುಂಬಿಸಿಡಲಾಗಿದ್ದ 30 ಸಾವಿರ ಸೀರೆಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಅಪಾರ ಪ್ರಮಾಣದ ಕರಪತ್ರಗಳನ್ನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Thirty thousand- saris – seized – BJP leader – illegally –collect-mysore