ಮೂರನೇ ಶನಿವಾರ ಅಧಿಕಾರಿಗಳು ಹಳ್ಳಿಗಳಲ್ಲಿ ಇರಬೇಕು : ಕಂದಾಯ ಸಚಿವ ಆರ್.ಅಶೋಕ್ 

ಬೆಂಗಳೂರು,ಫೆಬ್ರವರಿ,16,2021(www.justkannada.in) : ಕಂದಾಯ ಇಲಾಖೆ ಮಾತೃ ಇಲಾಖೆ. ಜನರ ಬಳಿಗೆ ಈ ಇಲಾಖೆ ಕೊಂಡೊಯ್ಯುತ್ತೇವೆ. ಮೂರನೇ ಶನಿವಾರ ಅಧಿಕಾರಿಗಳು ಹಳ್ಳಿಗಳಲ್ಲಿ ಇರಬೇಕು. ವಿಸಿಂಟಿಂಗ್ ಅಧಿಕಾರಿಗಳಾಗಿ ಹೋಗಬಾರದು.  ಜನರ ಸಮಸ್ಯೆಗಳನ್ನ ಅರಿತು ಪರಿಹರಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.jkವಿಕಾಸಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಡಿಸಿಗಳ ಜೊತೆ ಸಭೆ ನಡೆಸಿದ್ದೇವೆ. ಜನರಿಂದ ಡಿಸಿಗಳು ಅಹವಾಲು ಸ್ವೀಕರಿಸಬೇಕು. ನಂತರ ಅಲ್ಲೇ ಅವರ ಸಮಸ್ಯೆ ಬಗೆಹರಿಸಬೇಕು. ಅಧಿಕಾರಿಗಳನ್ನ ಹಳ್ಳಿಗೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಗಮನಹರಿಸಿದೆ ಎಂದರು.

ಹಳ್ಳಿಗರಿಗೆ ಕಚೇರಿ ಅಲೆಯುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ೨೦ ರಂದು ೨೨೭ ಕಡೆ ಅಧಿಕಾರಿಗಳು ಹೋಗುತ್ತಾರೆ. ಪ್ರತಿ ತಾಲೂಕಿಗೆ ತಹಸೀಲ್ದಾರ್,ಎಸಿ ಭೇಟಿ ನೀಡುತ್ತಾರೆ. ಬೆಳಗ್ಗೆ ೧೦ ರಿಂದಲೇ ಅವರ ಕಾರ್ಯಕ್ರಮ ಆರಂಭವಾಗುತ್ತದೆ ಎಂದು ಹೇಳಿದರು.

ಅಂಗವಿಕಲರನ್ನ ಗುರುತಿಸಬೇಕು. ಕಣ್ಣಿಲ್ಲದವರನ್ನು ಭೇಟಿ ಮಾಡಬೇಕು. ಅವರ ಸಮಸ್ಯೆಗಳನ್ನ ಪರಿಹರಿಸಬೇಕು. ಸರ್ಕಾರಿ ಭೂಮಿ ಗುರುತಿಸಿ ಅಲ್ಲಿ ಗಿಡನೆಡಬೇಕು. ಯಾವ ಗ್ರಾಮಕ್ಕೆ‌ ಹೋಗುತ್ತಾರೆ ಅಲ್ಲಿ ಶಾಲೆ,ಹಾಸ್ಟೆಲ್ ಗಳಲ್ಲೇ ಪುರುಷ ಡಿಸಿ,ಎಸಿಗಳು ಉಳಿದುಕೊಳ್ಳಬೇಕು. ಈ ಮೂಲಕ ಅಲ್ಲಿನ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಾನು ವಾಸ್ತವ್ಯ ಮಾಡುತ್ತೇನೆ. ಚಕ್ಕಡಿಯಲ್ಲಿ ಹೋಗಿ ದೇವರ ದರ್ಶನ ಮಾಡುತ್ತೇನೆ. ದಲಿತ ಕೇರಿಯ ಸಮಸ್ಯೆಗಳನ್ನ ಆಲಿಸುತ್ತೇನೆ. ನಂತರ ಹಳ್ಳಿಯ ಎಲ್ಲಾ ಮನೆಗಳಿಗೆ ಭೇಟಿ ನೀಡುತ್ತೇನೆ ಎಂದರು.

ಅದೇ ಹಳ್ಳಿಯಲ್ಲಿ ಆರೋಗ್ಯ ಶಿಬಿರ ನಡೆಯುತ್ತೆ. ಅಲ್ಲಿನ ಸ್ಥಳೀಯ ಶಾಸಕರ ಜೊತೆ ಚರ್ಚಿಸುತ್ತೇನೆ. ಸಮಸ್ಯೆಗಳನ್ನ ಸರಿಪಡಿಸುತ್ತೇನೆ. ರಾತ್ರಿ ಸ್ಥಳೀಯ ಕಲಾವಿದರ ಜೊತೆ ಕೂರುತ್ತೇನೆ. ರಾತ್ರಿ ಒಬಿಸಿ ಹಾಸ್ಟೆಲ್ ನಲ್ಲೇ ವಾಸ್ತವ್ಯ ಹೂಡುತ್ತೇನೆ ಎಂದು ವಿವರಿಸಿದ್ದಾರೆ.

ಪ್ರತಿ ತಿಂಗಳು ಈ ವಾಸ್ತವ್ಯ ನಡೆಯಲಿದೆ

ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ. ಈಗಾಗಲೇ ೨೨೭ ಹಳ್ಳಿಗಳಿಗೂ‌ ಮಾಹಿತಿ ನೀಡಿದ್ದೇವೆ. ಅಧಿಕಾರಿಗಳ ಗ್ರಾಮವಾಸ್ತವ್ಯದ ಬಗ್ಗೆ ತಿಳಿಸಿದ್ದೇವೆ. ಪ್ರತಿ ತಿಂಗಳು ಈ ವಾಸ್ತವ್ಯ ನಡೆಯಲಿದೆ. ಯಾವ ಹಳ್ಳಿಗೆ ಹೋಗುತ್ತಾರೆ. ಆ ಗ್ರಾಮದವರು ಮಾತ್ರ ಭಾಗಿ. ಬೇರೆ ಹಳ್ಳಿಯವರು ಭಾಗವಹಿಸುವಂತಿಲ್ಲ. ಖಾತೆ,ಪಹಣಿ,ಪಿಂಚಣಿ,ಅಂಗವಿಕಲರ ಸಮಸ್ಯೆ ಪರಿಹರಿಸಬೇಕು. ಸ್ಥಳದಲ್ಲೇ ಡಿಸಿಗಳು ಆದೇಶ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಮಹಿಳಾ ಡಿಸಿಗಳು ಗ್ರಾಮವಾಸ್ತವ್ಯಕ್ಕೆ ಒಪ್ಪಿದ್ದಾರೆ.  ಪ್ರವಾಹ ಸಂತ್ರಸ್ಥರ ಸಮಸ್ಯೆಯನ್ನೂ ಬಗೆಹರಿಸುತ್ತಾರೆ. ಕೆಲವು ಕಡೆ ಕಾಲು ದಾರಿಗಳಿಲ್ಲ. ಅಂತಹ ಕಡೆ ಕಾಲು ದಾರಿಗಳನ್ನ ಮಾಡಬೇಕು. ಡಿಸಿಗಳು ಅಲ್ಲಿ ತೆರಳಿ ಸಮಸ್ಯೆ ಬಗೆಹರಿಸಬೇಕು. ಜನಪ್ರತಿನಿಧಿಗಳು ಕೂಡ ೧ ಗಂಟೆ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.

ರೆಡಿಯೋ ಈಗ ಔಟ್ ಡೇಟೆಡ್ ಆಗಿದೆ. ಟಿವಿ ಎಲ್ಲರ ಮನೆಯಲ್ಲೂ ಇರುತ್ತೆThird,Saturday,Officers,villages,Must,Revenue,Minister,R. Ashok

 

ಉಮೇಶ್ ಕತ್ತಿ ಬಿಪಿಎಲ್ ಕಾರ್ಡ್ ರದ್ಧು ವಿಚಾರವಾಗಿ ಪ್ರತಿಕ್ರಿಯಿಸಿ, ರೆಡಿಯೋ ಈಗ ಔಟ್ ಡೇಟೆಡ್ ಆಗಿದೆ. ಟಿವಿ ಎಲ್ಲರ ಮನೆಯಲ್ಲೂ ಇರುತ್ತೆ. ಇದನ್ನ ಮಾನದಂಡವಾಗಿ ಇಟ್ಟುಕೊಳ್ಳುವುದು ಸರಿಯಲ್ಲ. ಇವತ್ತು ೫ ಸಾವಿರಕ್ಕೂ ಟಿವಿ ಸಿಗುತ್ತೆ. ಮೊಬೈಲ್,ಟಿವಿ ಅವಶ್ಯಕತೆ ಇರುವಂತದ್ದು. ಇದನ್ನ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ನಮ್ಮ ಸಚಿವರು ಯಾವ ಸಂದರ್ಭದಲ್ಲಿ ಹೇಳಿದ್ದಾರೋ. ಅವರಿಗೂ ಅಂತಹ ಅಭಿಪ್ರಾಯವಿಲ್ಲ. ಪರೋಕ್ಷವಾಗಿ ಕತ್ತಿಗೆ ತಿರುಗೇಟು ನೀಡಿದರು.

ಉತ್ತರಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಚಾಮರಾಜನಗರ, ಕರಾವಳಿ ಭಾಗದಲ್ಲಿ ವಾಸ್ತವ್ಯ ಮಾಡುತ್ತೇನೆ. ಪ್ರತಿವರ್ಷ ೪ ಲಕ್ಷ ಜನ ಪೆನ್ಶನ್ ಸೇರ್ಪಡೆಯಾಗುತ್ತಾರೆ. 43 ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರ. ಸಿಎಂ ಅವರು ಇದರ ತೀರ್ಮಾನ ತೆಗೆದುಕೊಂಡಿದ್ದಾರೆ. ಅವರ ತೀರ್ಮಾನಕ್ಕೆ ನನ್ನ ಸಹಮತವಿದೆ. ಅನಿವಾರ್ಯವಲ್ಲ,ಮುಕ್ತವಾಗಿಯೇ ಒಪ್ಪಿಕೊಂಡಿದ್ದೇನೆ. ೭.೫ ಸಾವಿರ ಕೋಟಿ ಇದಕ್ಕೆ ಖರ್ಚು ಬರಲಿದೆ. ಕೇಂದ್ರದ ಅನುದಾನ ೧೦%ರಾಜ್ಯದ ೯೦% ಅನುದಾನವಿದೆ ಎಂದು ತಿಳಿಸಿದ್ದರು.

key words : Third-Saturday-Officers-villages-Must-Revenue-Minister-R. Ashok