No Ball ತೀರ್ಮಾನ ಇನ್ಮುಂದೆ ಥರ್ಡ್ ಅಂಪೈರ್ ಮಾಡಲಿದ್ದಾರೆ !

ಬೆಂಗಳೂರು, ಡಿಸೆಂಬರ್ 06, 2019 (www.justkannada.in): ಇಂಡೋ-ವಿಂಡೀಸ್ ಸರಣಿಯಲ್ಲಿ ಥರ್ಡ್ ಅಂಪೈರ್ ನೋಬಾಲ್ ಗಮನಿಸಲಿದ್ದಾರೆ.

ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ-20 ಮತ್ತು ಏಕದಿನ ಸರಣಿಗೆ ಮೂರನೇ ಅಂಪೈರ್ ನೋಬಾಲ್ ಗುರುತಿಸಲಿದ್ದಾರೆ.
ಈ ಹಿಂದಿನಿಂದಲೂ ಕ್ರಿಕೆಟ್ ಪಂದ್ಯಗಳಲ್ಲಿ ನೋಬಾಲ್ ವಿಚಾರದಲ್ಲಿ ಗೊಂದಲ ಸಾಮಾನ್ಯ. ಈ ಗೊಂದಲಗಳಿಗೆ ತೆರೆಎಳೆಯಲು ಐಸಿಸಿ ಪ್ರಯತ್ನ ಮಾಡುತ್ತಿದೆ.
ಇನ್ನು ಮುಂದೆ ನೋಬಾಲ್ ಮಾಡಿದರೆ ಅದನ್ನು ಮೈದಾನದಲ್ಲಿರುವ ಆಂಪೈರ್ ಹೇಳುವುದಿಲ್ಲ. ಬದಲಾಗಿ ಅ ಪಂದ್ಯದಲ್ಲಿ ಮೂರನೇ ಆಂಪೈರ್ ಆಗಿ ಕಾರ್ಯನಿರ್ವಹಿಸುವವರು ನೋಬಾಲ್ ಎಂದು ತೀರ್ಮಾನ ಮಾಡಲಿದ್ದಾರೆ.