ರಾಜ್ಯದಲ್ಲಿ ಸದ್ಯಕ್ಕಿಲ್ಲ ಸಿನಿಮಾ ಥಿಯೇಟರ್ ಓಪನ್…

kannada t-shirts

ಮೈಸೂರು,ಫೆಬ್ರವರಿ,2,2021(www.justkannada.in): ಹಂಚಿಕೆ ಸೂತ್ರಕ್ಕೆ ನಿರ್ಮಾಪಕರು ಒಪ್ಪದಿದ್ದರೆ ಚಿತ್ರಪ್ರದರ್ಶನ ಮಾಡಲ್ಲ. ನಿರ್ಮಾಪಕರು ಷರತ್ತಿಗೆ ಒಪ್ಪದಿದ್ದರೆ ಥಿಯೇಟರ್ ಓಪನ್ ಆಗಲ್ಲ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿಯ ಆರ್.ಆರ್ ಓದುಗೌಡರ್ ಸ್ಪಷ್ಟನೆ ನೀಡಿದ್ದಾರೆ.jk

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ‌ನಡೆಸಿ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ ಮಾಹಿತಿ  ನೀಡಿತು. ಈ ವೇಳೆ ಮಾತನಾಡಿದ ಓದುಗೌಡರ್,  ನಿರ್ಮಾಪಕರು ಹಾಗೂ  ಪ್ರದರ್ಶಕರು, ಥಿಯೇಟರ್ ಮಾಲೀಕರ ನಡುವೆ ಚರ್ಚೆ ನಡೆದಿದೆ. ಆದರೆ ಯಾವೊಂದು ತೀರ್ಮಾನಕ್ಕೆ ಬರಲಾಗಿಲ್ಲ. ನಿರ್ಮಾಪಕರೇ ಏಕಪಕ್ಷಿಯವಾಗಿ ಪತ್ರಿಕೆ ಹೇಳಿಕೆ ನೀಡಿದ್ದಾರೆ‌‌. ಇದನ್ನು ಥಿಯೇಟರ್ ಮಾಲೀಕರು ಖಂಡಿಸುತ್ತೇವೆ ಎಂದರು.

ಹಾಗೆಯೇ ಹಂಚಿಕೆ ಸೂತ್ರಕ್ಕೆ ನಿರ್ಮಾಪಕರು ಒಪ್ಪಿಗೆ ಸೂಚಿಸಿದಿದ್ದರೆ ಯಾವ ಕಾರಣಕ್ಕೂ ಸಿಂಗಲ್ ಸ್ಕ್ರಿನ್ ನಲ್ಲಿ ಸಿನಿಮಾ ಪ್ರದರ್ಶನ ನಡೆಸಲ್ಲ. ಶೇರಿಂಗ್ ನೀಡಲು ನಿರ್ಮಾಪಕರಿಗೆ ನಾವು ಮನವಿ ಮಾಡಿಕೊಂಡಿದ್ದೇವೆ. ಅವರು ಕೇವಲ ಬಾಡಿಗೆ ಮಾತ್ರ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಇವತ್ತಿನ ಸನ್ನಿವೇಶದಲ್ಲಿ ಥಿಯೇಟರ್ ನಡೆಸುವುದು ದುಸ್ತರ. ಸಾಲ ಮಾಡಿ ನಡೆಸಲು ಆಗುವುದಿಲ್ಲ‌‌. ನಿರ್ಮಾಪಕರು ಪ್ರದರ್ಶಕರು  ಮಾತಿಗೆ ಒಪ್ಪದಿದ್ದರೆ ಥಿಯೇಟರ್ ಗಳನ್ನು ವಾಣಿಜ್ಯ ಕಟ್ಟಡಕ್ಕೆ ಬಳಸುತ್ತೀವಿ ಎಂದು ಓದುಗೌಡರ್ ತಿಳಿಸಿದರು.There is- currently -no theatre- open – state-mysore- odhugowdar

ಈ ನಡುವೆ ತಮಿಳುನಾಡು, ಕೇರಳಾದಲ್ಲಿ ಶೇರಿಂಗ್ ವ್ಯವಹಾರ ನಡೆಯುತ್ತಿದೆ. ಅದರಂತೆಯೇ ನಮ್ಮ ರಾಜ್ಯದಲ್ಲೂ ನಿರ್ಮಾಪಕರು ಶೇರಿಂಗ್ ನೀಡಲಿ ಇಲ್ಲವಾದರೇ ಥಿಯೇಟರ್ ಓಪನ್ ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು.

ENGLISH SUMMARY…

Cinemas will not open as of now in Karnataka
Mysuru, Feb. 2, 2021 (www.justkannada.in): “If the producers won’t agree to our distribution formula we won’t commence cinema halls. If the producers won’t agree to our conditions we won’t open the theatres,” opined R.R. Odugoudar of the Karnataka Cinema Theatres Federation.There is- currently -no theatre- open – state-mysore- odhugowdar
Addressing a press meet held in Mysuru today he said, “a discussion is being held between the producers, distributors and cinema hall owners, but unfortunately no decision is being arrived at. The producers are not cooperating and we the theatre owners will criticize this,” he said.
He expressed his view that the film producers’ should agree to do business on sharing basis like in Tamil Nadu and Kerala.
Keywords: Film producers/ Cinema halls/ Film theatres

Key words: There is- currently -no theatre- open – state-mysore- odhugowdar

website developers in mysore