ಕೊರೊನಾ ವೈರಸ್‌ ನಮ್ಮೊಂದಿಗೆ ದೀರ್ಘಕಾಲದವರೆಗೆ ಇರುತ್ತದೆ ಎಚ್ಚರಿಕೆ ಎಂದ ವಿಶ್ವ ಆರೋಗ್ಯ ಸಂಸ್ಥೆ

ದೆಹಲಿ, ಏಪ್ರಿಲ್ 23, 2020 (www.justkannada.in): ಕೊರೊನಾ ವೈರಸ್ನಮ್ಮೊಂದಿಗೆ ದೀರ್ಘಕಾಲದವರೆಗೂ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಮತ್ತೊಮ್ಮೆ ವಿಶ್ವವನ್ನು ಎಚ್ಚರಿಸಿದ್ದಾರೆ.

 

ಕೊರೊನಾ ವೈರಸ್ಎಷ್ಟು ದಿನ ಬದುಕಿರುತ್ತೆ? ಒಬ್ಬ ವ್ಯಕ್ತಿಗೆ ಸೋಂಕು ತಗುಲಿದರೆ ಆತ ಚೇತರಿಸಿಕೊಳ್ಳಲು ಎಷ್ಟು ದಿನ ಆಗುತ್ತೆ? ಎಂಬುದಕ್ಕೆ ಇದುವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಹೀಗಾಗಿ ನಮ್ಮ ಹೋರಾಟ ಎಚ್ಚರಿಕೆಯಿಂದ ಇರಬೇಕುಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.

  

ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಹಲವು ದೇಶಗಳಲ್ಲಿ ಸಾಂಕ್ರಾಮಿಕ ರೋಗ ಆರಂಭಿಕ ಹಂತದಲ್ಲಿದೆತಪ್ಪು ಮಾಡಬೇಡಿ. ಈ ವೈರಸ್ ಜೊತೆ ನಾವು ದೀರ್ಘಕಾಲದವರೆಗೂ ಇರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.