ಸಾಲ ಮರುಪಾವತಿ ಅವಧಿ ವಿಸ್ತರಣೆ ಇಲ್ಲ ಎಂದ ಆರ್’ಬಿಐ ಗವರ್ನರ್

kannada t-shirts

ನವದೆಹಲಿ, ಸೆಪ್ಟೆಂಬರ್ 01, 2020 (www.justkannada.in): 6 ತಿಂಗಳ ಕಾಲ ಮುಂದೂಡಲಾಗಿದ್ದ ಸಾಲದ ಮೇಲಿನ ಇಎಂಐ ಪಾವತಿ ಇಂದಿನಿಂದ ಶುರುವಾಗಲಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

ದೇಶಾದ್ಯಂತ ಕೊರೋನಾ ವೈರಸ್ ಹಿನ್ನೆಲೆಯಲ್ಲಿ 6 ತಿಂಗಳ ಕಾಲ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಲಾಗಿತ್ತು,

ಈ ಬಗ್ಗೆ ಮಾಹಿತಿ ನೀಡಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಸಾಲ ಪಾವತಿ ಮುಂದೂಡುವುದು ತಾತ್ಕಾಲಿಕ ಪರಿಹಾರ, ಇದರಿಂದ ಬ್ಯಾಂಕ್ ಗಳಿಗೆ ಭಾರಿ ಸಮಸ್ಯೆಯಾಗಲಿದೆ. ಇದರಿಂದ ಸಾಲ ಮರುಪಾವತಿದಾರರಿಗೂ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಸೆ.1 ರಿಂದ ಸಾಲ ಮರುಪಾವತಿ ವಿನಾಯಿತಿ ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ.

ಕೊರೋನಾ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಇಎಂಐ ವಿನಾಯಿತಿ ಮಾರ್ಚ್ ನಿಂದ ಆಗಸ್ಟ್ ವರೆಗೆ 6 ತಿಂಗಳು ಕಂತು ಕಟ್ಟಲು ವಿನಾಯಿತಿ ನೀಡಿ, ಇಎಂಐ ಪಾವತಿ ಮುಂದೂಡಿಕೆಗೆ ಅವಕಾಶ ನೀಡಲಾಗಿತ್ತು.

website developers in mysore